ವೈರಲ್

ಬೆಂಗಳೂರು: ಕಲ್ಲಿನಿಂದ ಜಜ್ಜಿ ಕಂಡಕ್ಟರ್ ಕೊಲೆಗೆ ಯತ್ನ.. ಆರೋಪಿ ಅರೆಸ್ಟ್

ಕೃತ್ಯ ನಡೆಯುವ ಮೂರು ದಿನದ ಹಿಂದೆ ಪಾಸ್ ತೋರಿಸುವ ವಿಚಾರಕ್ಕೆ ಬಸ್ ನಿರ್ವಾಹಕ ಮತ್ತು ಆರೋಪಿಯ ನಡುವೆ ಕಿರಿಕ್ ಆಗಿತ್ತು. ಆ ವೇಳೆ ಕಂಡಕ್ಟರ್ ಸಂಗಪ್ಪನ ಹೊಟ್ಟೆಗೆ ಗುದ್ದಿ ಆರೋಪಿ ಎಸ್ಕೇಪ್ ಆಗಿದ್ದನು.

ಬೆಂಗಳೂರು : ವೈಟ್ ಫೀಲ್ಡ್ ಬಳಿಯ ಐಟಿಪಿಎಲ್ ಬಸ್ ಸ್ಟಾಪ್ ನಲ್ಲಿ ಬಿಎಂಟಿಸಿ ವೋಲ್ವೋ ಬಸ್ ಕಂಡಕ್ಟರ್ ಯೋಗೇಶ್ ಗೆ ಹರ್ಷ ಸಿನ್ಹಾ ಎಂಬ ಯುವಕ ಚಾಕುವಿನಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದ. ಅಂತಹದ್ದೆ ಮತ್ತೊಂದು ಘಟನೆಯೊಂದು ಬೆಳಕಿಗೆ ಬಂದಿದೆ.

BMTC | A BMTC City built, built on a Tata LPO1616 SLF chassi… | Flickr

ಆರೋಪಿ ಹೇಮಂತ್ ಎಂಬುವನು ಕಂಡಕ್ಟರ್ ಸಂಗಪ್ಪ ಅವರಿಗೆ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೇರೆಯಾಗಿದೆ. ಈ ಘಟನೆ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ.

ಬೆಂಗಳೂರಿನಲ್ಲಿ  BMTC ಬಸ್ ಡ್ರೈವರ್ ಮತ್ತು ಕಂಡೆಕ್ಟರ್ ಗಳ ಮೇಲೆ ಹಲ್ಲೆ ಯತ್ನಗಳು ನಡೆಯುತ್ತಿದ್ದು, KA-14F1107 ನಂಬರಿನ ಬಿಎಂಟಿಸಿ ಬಸ್ ನಲ್ಲಿಈ ಘಟನೆ ನಡೆದಿದೆ. ಕೃತ್ಯ ನಡೆಯುವ ಮೂರು ದಿನದ ಹಿಂದೆ ಪಾಸ್ ತೋರಿಸುವ ವಿಚಾರಕ್ಕೆ ಬಸ್ ನಿರ್ವಾಹಕ ಮತ್ತು ಆರೋಪಿಯ ನಡುವೆ ಕಿರಿಕ್ ಆಗಿತ್ತು. ಆ ವೇಳೆ ಕಂಡಕ್ಟರ್ ಸಂಗಪ್ಪನ ಹೊಟ್ಟೆಗೆ ಗುದ್ದಿ ಆರೋಪಿ ಎಸ್ಕೇಪ್ ಆಗಿದ್ದನು.

ಕೆಲ ದಿನಗಳಿಂದ ಕಂಡಕ್ಟರ್ ಮೇಲೆ ಹಲ್ಲೆ ಮಾಡಲು ಹೊಂಚು ಹಾಕಿದ್ದ ಕಿಡಿಗೇಡೆ ಹೇಮಂತ್, ಕಳೆದ ಶುಕ್ರವಾರ (ಅ.18)ಮಧ್ಯಾಹ್ನ 2.30 ರ ಸುಮಾರಿಗೆ, ಊಟ ಮಾಡುತ್ತಿರುವ ವೇಳೆ ಆರೋಪಿ ದೊಡ್ಡದಾದ ಕಲ್ಲಿನಿಂದ ಕಂಡಕ್ಟರ್ ತಲೆಗೆ ಹೊಡೆದು ಎಸ್ಕೇಪ್ ಆಗಿದ್ದಾನೆ. ನಂತರ ಪ್ರಯಾಣಿಕರು ಆತನನ್ನು ಹಿಡಿದು ಪೋಲಿಸರ ವಶಕ್ಕೆ ನೀಡಿದ್ದಾರೆ.