ಕರ್ನಾಟಕ

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ: ಕ್ಯಾಮರಾ ಇಲ್ಲ ಎಂದು ಕಳ್ಳಾಟ ಮಾಡಿದರೆ ಹುಷಾರ್​: ಹೊಸ ನಿಯಮದಡಿ ಬೀಳುತ್ತೆ ದಂಡ !

ಇತ್ತೀಚೆಗೆ ಎಕ್ಸ್‌ಪ್ರೆಸ್‌ ವೇನಲ್ಲಿನ ​ಎಎನ್‌ಪಿಆರ್‌ ಕ್ಯಾಮರಾ ಎಲ್ಲಿದೆ ಎಂಬುದನ್ನು ಕೆಲ ಆ್ಯಪ್‌ಗಳ ಸಹಾಯದಿಂದ ತಿಳಿದುಕೊಂಡು ಕ್ಯಾಮೆರಾ ಮುಂದೆ ಮಾತ್ರ ವೇಗ ತಗ್ಗಿಸಿ ಕ್ಯಾಮರಾ ಇಲ್ಲದೆ ಇರುವ ಸ್ಥಳದಲ್ಲಿಅತಿವೇಗದ ಚಾಲನೆ ಮಾಡುತ್ತಿದ್ದರು. ಇದರ ತಡೆಗೆ ಎಸ್‌ಟಿಎಂಎಸ್‌ ತಂತ್ರಜ್ಞಾನ ಅಳವಡಿಸಿದ ಪರಿಣಾಮ, ಆಗಸ್ಟ್‌ ತಿಂಗಳಲ್ಲಿ 89,200(ಆ.26ವರೆಗೆ) ಪ್ರಕರಣಗಳನ್ನು ಸೆಕ್ಷನಲ್‌ ಸ್ಪೀಡ್‌ ಆಧರಿಸಿ ದಾಖಲಿಸಿದ್ದಾರೆ.

ರಾಮನಗರ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಓವರ್ ಸ್ಪೀಡ್ ಆಗಿ ಗಾಡಿ ಓಡಿಸಿದರೆ ದಂಡ ಪಾವತಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನ್ಮುಂದೆ ಕ್ಯಾಮೆರಾ ಇಲ್ಲದ ಕಡೆಯೂ ಮಿತಿಮೀರಿದ ವೇಗದಲ್ಲಿ ಹೋಗುವಂತಿಲ್ಲ. ತಿರುಪತಿ ಬೆಟ್ಟ ಮತ್ತು ರಾಜ್ಯದ ಅಭಯಾರಣ್ಯಗಳ ರಸ್ತೆಗಳ ಮಾದರಿಯಲ್ಲೇ ಕ್ರಮಿಸಬೇಕಾದ ದೂರ ಹಾಗೂ ಅದಕ್ಕೆ ತಗಲುವ ಸಮಯ ಆಧರಿಸಿ, ನಿಯಮ ಮೀರುವವರ ವಿರುದ್ಧ ದಂಡ ಹಾಕಲಾಗುತ್ತದೆ.

 ಇಷ್ಟು ದಿನ ಎಕ್ಸ್ಪ್ರೆಸ್ವೇನಲ್ಲಿ ಎಎನ್ಪಿಆರ್ಕ್ಯಾಮರಾ ಕಂಡಾಗ ಮಾತ್ರ ವಾಹನವನ್ನು ನಿಗದಿತ ವೇಗದಲ್ಲಿ ಸಂಚರಿಸುತ್ತಿದ್ದವರು, ಕ್ಯಾಮರಾ ಇಲ್ಲದ ಕಡೆ ಮಿತಿ ಮೀರಿದ ವೇಗದಲ್ಲಿ ವಾಹನ ಚಲಿಸುತ್ತಿದ್ದರು. ಇದರಿಂದ ಅಪಘಾತದ ಸಾಧ್ಯತೆಗಳು ಹೆಚ್ಚಿದ್ದವು. ಇದನ್ನು ತಡೆಯಲು ನಿರ್ಧರಿಸಿದ ಪೊಲೀಸರು, 'ಸೆಕ್ಷನಲ್ಸ್ಪೀಡ್‌' ಎಂಬ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಆಗಸ್ಟ್ಒಂದೇ ತಿಂಗಳಲ್ಲಿ 1.10 ಲಕ್ಷಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಕ್ಸ್ಪ್ರೆಸ್ವೇನಲ್ಲಿ 48 ಕಡೆ ಎಎನ್ಆರ್ಪಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಕೆಲವೆಡೆ ಪೊಲೀಸ್ಇಲಾಖೆ ಕ್ಯಾಮರಾಗಳನ್ನು ಅಳವಡಿಸಿದ್ದರೆ, ಮತ್ತೆ ಕೆಲವೆಡೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೆ, ಇತ್ತೀಚೆಗೆ ಎಕ್ಸ್ಪ್ರೆಸ್ವೇನಲ್ಲಿನ  ಎಎನ್ಪಿಆರ್ಕ್ಯಾಮರಾ ಎಲ್ಲಿದೆ ಎಂಬುದನ್ನು ಕೆಲ ಆ್ಯಪ್ಗಳ ಸಹಾಯದಿಂದ ತಿಳಿದುಕೊಂಡು ಕ್ಯಾಮರಾ ಮುಂದೆ ಮಾತ್ರ ವೇಗ ತಗ್ಗಿಸಿ ಕ್ಯಾಮರಾ ಇಲ್ಲದೆ ಇರುವ ಸ್ಥಳದಲ್ಲಿಅತಿವೇಗದ ಚಾಲನೆ ಮಾಡುತ್ತಿದ್ದರು. ಇದರ ತಡೆಗೆ ಎಸ್ಟಿಎಂಎಸ್ತಂತ್ರಜ್ಞಾನ ಅಳವಡಿಸಿದ ಪರಿಣಾಮ, ಆಗಸ್ಟ್ತಿಂಗಳಲ್ಲಿ 89,200(.26ವರೆಗೆ) ಪ್ರಕರಣಗಳನ್ನು ಸೆಕ್ಷನಲ್ಸ್ಪೀಡ್ಆಧರಿಸಿ ದಾಖಲಿಸಿದ್ದಾರೆ.

 ಕ್ಯಾಮರಾ ಇರಲಿ, ಬಿಡಲಿ ಎಕ್ಸ್ಪ್ರೆಸ್ವೇ ಏರುವ ಮುನ್ನ 100 ಕಿ.ಮೀಗಿಂತ ಅತೀ ವೇಗಕ್ಕೆ ಕಡಿವಾಣ ಹಾಕುವುದು ಉತ್ತಮ. ಹೈವೇನಲ್ಲಿ 100 ಕಿ.ಮೀ ವೇಗದ ಮಿತಿ ಇದ್ದು, ಶೇ.5 ರಷ್ಟು ವೇಗಕ್ಕೆ ರಿಯಾಯಿತಿ ನೀಡಲಾಗುತ್ತಿದೆ. 105 ಕಿಮೀ ವೇಗ ದಾಟಿದ್ದೇ ಆದಲ್ಲಿ1000 ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ವೇಗದ ಮಿತಿ 130 ಕಿ.ಮೀ ದಾಟಿದರೆ ಅಂತಹ ವಾಹನಗಳ ವಿರುದ್ಧ ಎಫ್ಐಆರ್ದಾಖಲಿಸಲಾಗುತ್ತಿದೆ. .1 ರಿಂದ ಎಫ್ಐಆರ್ದಾಖಲಿಸುತ್ತಿದ್ದು, ಇದುವರೆಗೆ 400ಕ್ಕೂ ಹೆಚ್ಚು ಎಫ್ಐಆರ್ದಾಖಲಿಸಲಾಗಿದೆ.