ಸ್ಪೆಷಲ್ ಸ್ಟೋರಿ

ಮೊಟ್ಟೆ ಪ್ರೀಯರೇ ಎಚ್ಚರ..ಎಚ್ಚರ! ಮಾರುಕಟ್ಟೆಯಲ್ಲಿ ಹೆಚ್ಚಾಗ್ತಿದೆ ಪ್ಲಾಸ್ಟಿಕ್​ ಕೋಳಿ ಮೊಟ್ಟೆ ಹಾವಳಿ..!

ಸುಲಭವಾಗಿ ಪ್ಲಾಸ್ಟಿಕ್ ಕೋಳಿ ಮೊಟ್ಟೆ ಮತ್ತು ನಿಜವಾದ ಕೋಳಿ ಮೊಟ್ಟೆ ನಡುವೆ ಇರುವ ವ್ಯತ್ಯಾಸವನ್ನು ಹೇಗೆ ಕಂಡುಹಿಡಿಯುವು ಎಂಬುವುದನ್ನ ನಾವು ತಿಳಿಸುತ್ತೇವೆ.

ಕುಡಿಯುವ ನೀರಿನಿಂದ ಹಿಡಿದು, ತಿನ್ನುವ ಆಹಾರವು ಕಲಬೇರಕೆ ಆಗುತ್ತಿದೆ. ವೈದ್ಯರ ಸಲಹೆಯಂತೆ ಪ್ರತಿ ದಿನ ಒಂದು ಮೊಟ್ಟೆ ಸೇವಿಸುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಕೋಳಿ ಮೊಟ್ಟೆಗಳ ಹಾವಳಿ ಹೆಚ್ಚಾಗಿದೆ. ಅಂದರೆ ಕೋಳಿ ಮೊಟ್ಟೆ ಪ್ಲಾಸ್ಟಿಕ್ ರೂಪದಲ್ಲಿ ನಮ್ಮ ಕೈಗೆ ಸಿಗುತ್ತಿದೆ. ಪ್ಲಾಸ್ಟಿಕ್ ಕೋಳಿ ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಡೇಂಜರ್ ಗೊತ್ತಾ? ಸುಲಭವಾಗಿ ಪ್ಲಾಸ್ಟಿಕ್ ಕೋಳಿ ಮೊಟ್ಟೆ ಮತ್ತು ನಿಜವಾದ ಕೋಳಿ ಮೊಟ್ಟೆ ನಡುವೆ ಇರುವ ವ್ಯತ್ಯಾಸವನ್ನು ಹೇಗೆ ಕಂಡುಹಿಡಿಯುವು ಎಂಬುವುದನ್ನ ನಾವು ತಿಳಿಸುತ್ತೇವೆ.

ಶಬ್ದದ ಮೂಲಕ ಪತ್ತೆಹಚ್ಚಿ
ನಿಧಾನವಾಗಿ ಮೊಟ್ಟೆಯನ್ನ ಆಡಿಸಿದರೆ, ಒಳಗಿರುವ ದ್ರವದ ಶಬ್ದ ಕೇಳಿಸುವುದು. ನಿಜವಾದ ಕೋಳಿ ಮೊಟ್ಟೆಗಳ ಲಕ್ಷಣ ಇದು. ಒಂದು ವೇಳೆ ಪ್ಲಾಸ್ಟಿಕ್ ಕೋಳಿ ಮೊಟ್ಟೆ ಆದರೆ ಇಂತಹ ಶಬ್ದ ಬರುವುದಿಲ್ಲ. ಏಕೆಂದರೆ ಅದರಲ್ಲಿ ಯಾವುದೇ ತರಹದ ದ್ರವ ಇರುವುದಿಲ್ಲ.

ಹೊರಗಿನ ಶೆಲ್ ಚೆಕ್ ಮಾಡಿ
ಒಂದು ವೇಳೆ ನಿಜವಾದ ಕೋಳಿ ಮೊಟ್ಟೆ ಆದರೆ, ಶೆಲ್ ನಲ್ಲಿ ಸಣ್ಣ ಸಣ್ಣ ರಂದ್ರಗಳು ಇರುತ್ತವೆ. ಆದರೆ ಪ್ಲಾಸ್ಟಿಕ್ ಕೋಳಿ ಮೊಟ್ಟೆ ಹಾಗಲ್ಲ. ಇದು ನೋಡಲು ಗ್ಲಾಸಿ ಆಗಿರುತ್ತದೆ ಮತ್ತು ಮೊಟ್ಟೆಗಳ ಮೇಲ್ಮೈ ತುಂಬಾ ಸ್ಮೂತ್ ಆಗಿ ಕಂಡುಬರುತ್ತದೆ. ಅದೂ ಅಲ್ಲದೆ ನಿಜವಾದ ಕೋಳಿ ಮೊಟ್ಟೆ ಕೋಳಿಗಳ ತಳಿಯ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಮೊಟ್ಟೆಗಳ ಬಣ್ಣ ಬಿಳಿ, ಕಂದು ಅಥವಾ ನೀಲಿ, ಹಸಿರು ಕೂಡ ಆಗಿರುತ್ತದೆ. ನೋಡಲು ತುಂಬಾ ಸುಂದರವಾಗಿ ಕಂಡುಬರುವ ಕೋಳಿ ಮೊಟ್ಟೆ ಇದ್ದರೆ ಅದು ಪ್ಲಾಸ್ಟಿಕ್ ಕೋಳಿ ಮೊಟ್ಟೆ ಬಂದು ನೇರವಾಗಿ ಹೇಳಬಹುದು.

ನೀರಿನ ಟೆಸ್ಟ್ ಮೂಲಕ ಪತ್ತೆ ಹಚ್ಚಿ
 ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ನೀರು ಹಾಕಿ ನೀವು ತಂದ ಕೋಳಿ ಮೊಟ್ಟೆಗಳನ್ನು ಅದರಲ್ಲಿ ನಿಧಾನವಾಗಿ ಹಾಕಿ. ನಿಜವಾದ ಕೋಳಿ ಮೊಟ್ಟೆ ಆದರೆ ನೀರಿನಲ್ಲಿ ಮುಳುಗುತ್ತವೆ. ಒಂದು ವೇಳೆ ಕೆಟ್ಟು ಹೋದ ಅಥವಾ ಹಳೆಯ ಅಥವಾ ಪ್ಲಾಸ್ಟಿಕ್ ಕೋಳಿ ಮೊಟ್ಟೆ ಆದರೆ ನೀರಿನಲ್ಲಿ ತೇಲುತ್ತವೆ. ಈ ಟೆಸ್ಟ್ ಮಾಡುವ ಮೂಲಕ ಕೇವಲ ನಕಲಿ ಕೋಳಿ ಮೊಟ್ಟೆಗಳನ್ನು ಕಂಡು ಹಿಡಿಯುವುದು ಮಾತ್ರವಲ್ಲ, ಮೊಟ್ಟೆಗಳ ತಾಜಾತನವನ್ನು ಕೂಡ ಪತ್ತೆ ಹಚ್ಚಬಹುದು.

ಕೋಳಿ ಮೊಟ್ಟೆಯ ತೂಕ ಚೆಕ್ ಮಾಡಿ
ನಿಜವಾದ ಕೋಳಿ ಮೊಟ್ಟೆ ಆದರೆ ಸ್ವಲ್ಪ ಭಾರ ಇರುತ್ತದೆ. ಆದರೆ ಪ್ಲಾಸ್ಟಿಕ್ ಕೋಳಿ ಮೊಟ್ಟೆ ಹಾಗಲ್ಲ. ಹಗುರವಾಗಿರುತ್ತದೆ. ನೀವು ಹಿಡಿದುಕೊಂಡ ಸಂದರ್ಭದಲ್ಲಿ ಕೋಳಿ ಮೊಟ್ಟೆ ಹಗುರವಾಗಿದ್ದರೆ, ಅದು ನಿಜವಾದ ಕೋಳಿ ಮೊಟ್ಟೆ ಅಲ್ಲ. ಹೀಗೆ ಕೋಳಿ ಮೊಟ್ಟೆಯ ತೂಕದಿಂದ, ಮೊಟ್ಟೆ ನಿಜವಾದ್ದ ಅಥವಾ ಪ್ಲಾಸ್ಟಿಕ್ ಕೋಳಿ ಮೊಟ್ಟೆನಾ ಎಂದು ಕಂಡುಹಿಡಿಯಬಹುದು.

ನಕಲಿ ಕೋಳಿ ಮೊಟ್ಟೆ ತಿನ್ನುವುದರಿಂದ ಆಗುವ ಪರಿಣಾಮಗಳು
ಪ್ಲಾಸ್ಟಿಕ್ ಕೋಳಿ ಮೊಟ್ಟೆಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ. ಏಕೆಂದರೆ ಇದರಲ್ಲಿರುವ ಕೃತಕ ಬಣ್ಣಗಳು, ಕೃತಕ ರಾಸಾಯನಿಕಗಳು ಮತ್ತು ಪ್ರಿಸರ್ವೇಟಿವ್ ಗಳಿಂದ ಈ ಸಮಸ್ಯೆ ತಪ್ಪಿದ್ದಲ್ಲ. ಜೊತೆಗೆ ನಕಲಿ ಕೋಳಿ ಮೊಟ್ಟೆಗಳಿಂದ ಜೀರ್ಣಾಂಗ ವ್ಯವಸ್ಥೆಯ ತೊಂದರೆಗಳು ಎದುರಾಗುತ್ತವೆ. ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಮತ್ತು ಭೇದಿ ಸಾಮಾನ್ಯವಾಗಿ ಕಂಡುಬರುತ್ತದೆ.