ವೈರಲ್

BBMP ನಿರ್ಲಕ್ಷ್ಯಕ್ಕೆ ಬಾಲಕ ಸಾವು : ಕಣ್ಣು ದಾನ ಮಾಡಿದ ಪೋಷಕರು

ಮಲ್ಲೇಶ್ವರಂ ಆಟದ ಮೈದಾನದ ಗೇಟ್ ತುಕ್ಕು ಹಿಡಿದು ಹಾಳಾಗಿದ್ದರೂ ದುರಸ್ಥಿ ಮಾಡದೇ ಹಾಗೇ ಬಿಟ್ಟಿದ್ದಂತ ಬಿಬಿಎಂಪಿ ನಿರ್ಲಕ್ಷ್ಯದಿಂದಲೇ ಬಾಲಕ ನಿರಂಜನ್ ಸಾವನ್ನಪ್ಪಿರುವುದಾಗಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಸಂಬಂಧ ಮಲ್ಲೇಶ್ವರಂ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಂಗಳೂರು :  ಮಲ್ಲೇಶ್ವರಂ ನಲ್ಲಿರುವಂತ ಬಿಬಿಎಂಪಿ ಆಟದ ಮೈದಾನಕ್ಕೆ ಆಟವಾಡುವುದಕ್ಕೆ 10 ವರ್ಷದ ಬಾಲಕ ನಿರಂಜನ್ ತೆರಳಿದ್ದನು. ಬಿಬಿಎಂಪಿ ಆಟದ ಮೈದಾನದ ಗೇಟ್ ಮುರಿದು ಬಿದ್ದು ಬಾಲಕ ನಿರಂಜನ್ ಗಂಭೀರವಾಗಿ ಗಾಯಗೊಂಡಿದ್ದನು. ನಿರಂಜನ್ ನನ್ನ ಸಮೀಪದ ಕೆಸಿ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇಸಾವನ್ನಪ್ಪಿದ್ದಾನೆ. ಸಾವಿನ ನೋವಿನಲ್ಲಿ ಬಾಲಕನ ಪೋಷಕರು ಕಣ್ಣು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ.

ಈ ಕುರಿತು ಮಾತನಾಡಿದ ಮೃತ ಬಾಲಕ ನಿರಂಜನ್ ತಂದೆ ವಿಜಯ್, ಮೃತ ನಿರಂಜನ್ ಕಣ್ಣುಗಳನ್ನು ಲಯನ್ಸ್ ಇಂಟರ್‌ ನ್ಯಾಷನಲ್‌ ಐ ಬ್ಯಾಂಕ್‌ ಗೆ ದಾನ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಮಗನ ಸಾವಿನಲ್ಲೂ ಪೋಷಕರು  ಸಾರ್ಥಕತೆ ಮೆರೆದಿದ್ದಾರೆ.