ಕರ್ನಾಟಕ

ಮುಖ್ಯಮಂತ್ರಿ ಸಿಟಿ ರೌಂಡ್ಸ್​ - ಮಳೆ ಹಾನಿ ಪ್ರದೇಶಗಳಿಗೆ ಭೇಟಿ

ಅಮಾಯಕರ ಸಾವಿಗೆ ಹೊಣೆ ಯಾರು ?

ಬೆಂಗಳೂರು - ಸಿಲಿಕಾನ್ ಸಿಟಿ ಬೆಂಗಳೂರು ಕಳೆದ 4 ದಿನಗಳ ಮಳೆಗೆ ನಲುಗಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಕೈಗೊಂಡಿದ್ದಾರೆ.

ಬೆಳ್ಳಂಬೆಳ್ಳಿಗೆ ಬಾಬುಸಾಬ್ಪಾಳ್ಯ ಕಟ್ಟಡ ಕುಸಿತ ಪ್ರಕರಣದಲ್ಲಿ 8 ಮಂದಿ ಸಾವನ್ನಪ್ಪಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಘಟನೆ ಬಗ್ಗೆ ವಿವರ ನೀಡುವಾಗ ಅಸಮಾಧಾನ ಹೊರಹಾಕಿದರು. ಅನಧಿಕೃತ ಕಟ್ಟಡ ತಲೆಎತ್ತಲು ಕಾರಣವಾದ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದರು. 

ಇನ್ನೂ ಅಮಾಯಕರ ಸಾವಿಗೆ ಹೊಣೆ ಯಾರು ? ಶೀಘ್ರ ಎಲ್ಲ ಮಳೆ ಹಾನಿ ಪ್ರದೇಶಗಳ ಬಗ್ಗೆಯೂ ನಿಗಾ ಇಡುವಂತೆ ಕಮೀಷನರ್ಗೆ ಸಲಹೆ ನೀಡಿದರು. ಜೊತೆಗೆ ಸ್ಥಳದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ , ಸಾವನ್ನಪ್ಪಿದವರಿಗೆ ತಲಾ 5 ಲಕ್ಷ ರೂ ಪರಿಹಾರ ಹಾಗೇ ಬಿಬಿಎಂಪಿ ವತಿಯಿಂದಲೂ ತಲಾ 3 ಲಕ್ಷ ಪರಿಹಾರ  ಜತೆಗೆ ಕಾರ್ಮಿಕ ಇಲಾಖೆಯಿಂದ 2 ಲಕ್ಷ ರೂ ಪರಿಹಾರವನ್ನ ಘೋಷಿಸಿದರು ಇನ್ನೂ ಗಾಯಾಳು ಚಿಕಿತ್ಸಾ ವೆಚ್ಚ ಸರ್ಕಾರ ಭರಿಸಲಿದೆ ಎಂದರು.