ದೇಶ

ಸಿಜೆಐ ಡಿವೈ ಚಂದ್ರಚೂಡ್​ ನ.10 ನಿವೃತ್ತ: ಇವರೇ ನೋಡಿ ಮುಂದಿನ ಮುಖ್ಯ ನ್ಯಾಯ ಮೂರ್ತಿ..!

ಎಲ್ಲ ಮುಖ್ಯ ನ್ಯಾಯಮೂರ್ತಿಗಳು ತಾವು ನಿವೃತ್ತಿ ಹೊಂದುವ ಮುಂಚೆ ತಮ್ಮ ನಂತರದ ಹುದ್ದೆ ಯಾರಿಗೆ ಎಂದು ಸೂಚಿಸಬೇಕು.

ನವದೆಹಲಿ: ಸುಪ್ರೀಂ ಕೋರ್ಟ್‌ನ  ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ನವೆಂಬರ್ 10 ರಂದು ನಿವೃತ್ತಿ ಹೊಂದಲಿದ್ದಾರೆ. ಎಲ್ಲ ಮುಖ್ಯ ನ್ಯಾಯಮೂರ್ತಿಗಳು ತಾವು ನಿವೃತ್ತಿ ಹೊಂದುವ ಮುಂಚೆ ತಮ್ಮ ನಂತರದ ಹುದ್ದೆ ಯಾರಿಗೆ ಎಂದು ಸೂಚಿಸಬೇಕು. ಈ ಸಂಪ್ರದಾಯದಂತೆ  ಹಾಲಿ ಸಿಜೆಐ ಡಿವೈ ಚಂದ್ರಚೂಡ್, ಸುಪ್ರೀಂ ಕೋರ್ಟ್‌ನಲ್ಲಿನ ತಮ್ಮ ನಂತರದ ಎರಡನೇ ಹಿರಿಯ ನ್ಯಾಯಮೂರ್ತಿಯಾದ ಸಂಜೀವ್ ಖನ್ನಾ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸೂಚಿಸಿದ್ದಾರೆ.

ನ್ಯಾ. ಸಂಜೀವ್ ಖನ್ನಾ ಅವರ ಹೆಸರನ್ನು ಮುಂದಿನ ಸಿಜೆಐ ಹುದ್ದೆಗೆ ಸೂಚಿಸಿ, ಹಾಲಿ ಸಿಜೆಐ ಡಿವೈ ಚಂದ್ರಚೂಡ್ ಅವರು ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.