ವೈರಲ್

ಸಿಲಿಂಡರ್ ಸ್ಫೋಟ: ಇಬ್ಬರ ಸ್ಥಿತಿ ಗಂಭೀರ..ಆಸ್ಪತ್ರೆಗೆ ದಾಖಲು

ಈ ವೇಳೆ ಅದರ ಮಾಲೀಕ ತಮ್ಮ ಸಂಬಂಧಿಗಳಾದ ಸೈಯದ್‌ ರೆಯಾನ್‌ ಮತ್ತು ಸೈಯದ್‌ ಆಯಾನ್‌ ನನ್ನು ಗ್ಯಾಸ್‌‍ ರೀಫಿಲ್ಲಿಂಗ್‌ ಮಾಡಲು ನಿಯೋಜಿಸಿ ಹೊರಗೆ ಹೋಗಿದ್ದನು. ಇವರಿಬ್ಬರು ಗ್ಯಾಸ್‌‍ ರೀಫಿಲ್‌ ಮಾಡುವ ವೇಳೆ ಸಿಲಿಂಡರ್‌ ಸ್ಪೋಟಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ತಬರೇಜ್‌ ತಲೆ ಮರೆಸಿಕೊಂಡಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು : ಸಿಲಿಂಡರ್‌ ರೀಫಿಲಿಂಗ್‌ ಮಾಡುವಾಗ ಸ್ಫೋಟಗೊಂಡು ಇಬ್ಬರ ಸ್ಥತಿ ಗಂಭೀರವಾದ ಘಟನೆಯೊಂದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಸಂಭವಿಸಿದೆ. ಎಲೆಕ್ಟ್ರಾನಿಕ್‌ ಸಿಟಿಯ ಸೈಯದ್‌ ರೆಯಾನ್‌ ಹಾಗೂ ಸೈಯದ್‌ ಆಯಾನ್‌ ಗೆ ತೀವ್ರವಾಗಿ ಗಾಯಗೊಂಡವರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Couple killed in Dhaka cylinder blast

ಅನ್ವರ್‌ ಎಂಬಾತನ ಮನೆಯನ್ನು ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಗ್ಯಾಸ್‌‍ ರೀಫಿಲ್ಲಿಂಗ್‌ ದಂಧೆ ನಡೆಯುತ್ತಿತ್ತು. ಈ ವೇಳೆ ಅದರ ಮಾಲೀಕ ತಮ್ಮ ಸಂಬಂಧಿಗಳಾದ ಸೈಯದ್‌ ರೆಯಾನ್‌ ಮತ್ತು ಸೈಯದ್‌ ಆಯಾನ್‌ ನನ್ನು ಗ್ಯಾಸ್‌‍ ರೀಫಿಲ್ಲಿಂಗ್‌ ಮಾಡಲು ನಿಯೋಜಿಸಿ ಹೊರಗೆ ಹೋಗಿದ್ದನು. ಇವರಿಬ್ಬರು ಗ್ಯಾಸ್‌‍ ರೀಫಿಲ್‌ ಮಾಡುವ ವೇಳೆ ಸಿಲಿಂಡರ್‌ ಸ್ಪೋಟಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಆರೋಪಿ ತಬರೇಜ್‌ ತಲೆ ಮರೆಸಿಕೊಂಡಿದ್ದಾನೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.