ದೇಶ

ರಕ್ಕಸ ಡಾನಾ ಚಂಡಮಾರುತದಿಂದ ಸಾಲು ಸಾಲು ಸಂಕಷ್ಟ..!

ಚಂಡಮಾರುತದಿಂದ ಒಡಿಶಾದ ಸುಮಾರು 12 ಜಿಲ್ಲೆಗಳಿಗೆ ಹೈ ಅಲರ್ಟ್​ ಘೋಷಣೆಯಾಗಿದ್ದು, ಮುಂದಿನ 2 ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ಹೊರ ಬಿದ್ದಿದೆ.

ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಡಾನಾ ಚಂಡಮಾರುತದ ರಕ್ಕಸತನ ಮಿತಿ ಮೀರಿದೆ. ನಿನ್ನೆ ತಡರಾತ್ರಿ ಒಡಿಶಾ ಕರಾವಳಿಗೆ ಅಪ್ಪಳಿಸಿರುವ ಚಂಡಮಾರುತದ ಗಾಳಿ, 110-120 ಕಿಲೋಮೀಟರ್ ವೇಗದಲ್ಲಿ ಬೀಸಿದೆ. ಇದರಿಂದ ಒಡಿಶಾದ ಭುವನೇಶ್ವರ್, ಪುರಿ, ಪರದೀಪ್ ಮತ್ತು ಧಮ್ರಾ ಬಂದರು ಪ್ರದೇಶಗಳಲ್ಲಿ ನಿರಂತರವಾಗಿ ಭಾರಿ ಮಳೆಯಾಗುತ್ತಿದೆ. ಚಂಡಮಾರುತದಿಂದ ಒಡಿಶಾದ ಸುಮಾರು 12 ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆಯಾಗಿದ್ದು, ಮುಂದಿನ 2 ದಿನಗಳ ಕಾಲ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ಹೊರ ಬಿದ್ದಿದೆ. 

ಚಂಡಮಾರುತ ಎಫೆಕ್ಟ್ ನಿಂದ ಒಡಿಶಾ ಸರ್ಕಾರವನ್ನು ಸಂತ್ರಸ್ತರಿಗಾಗಿ, ಸುಮಾರು 800 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ ರಕ್ಷಣಾ ಪಡೆಗಳು ಕೂಡ ಪರಿಹಾರ ಕಾರ್ಯದಲ್ಲಿ ತೊಡಗಿವೆ. 

ಇನ್ನು ಡಾನಾ ಚಂಡಮಾರುತದ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ ಭಾರಿ ಹಾನಿಯುಂಟಾಗಿದೆ. ಪಶ್ಚಿಮ ಬಂಗಾಳ, ಒಡಿಶಾ ಮತ್ತು ಛತ್ತೀಸ್ ಗಢದ ಮೂಲಕ ಹಾದುಹೋಗುವ 300ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು, ರದ್ದುಗೊಳಿಸಲಾಗಿದೆ.