ಕರ್ನಾಟಕ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಲ್ಡೋಜರ್ ಸದ್ದು.. ಅನಧಿಕೃತ ಕಟ್ಟಡಗಳಿಗೆ ತಿಲಾಂಜಲಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಡಿಸಿಎಂ ಡಿಕೆಶಿ ಆದೇಶ ನೀಡಿದ್ದು, ಅದರಂತೆ ಸರ್ವೆ ನಡೆಸಿ ಅಕ್ರಮ ಕಟ್ಟಡಗಳನ್ನು ಕೆಡವಲು ಬಿಬಿಎಂಪಿ ಮುಂದಾಗಿದೆ.

ಬೆಂಗಳೂರಿನ ಬಾಬುಸ ಪಾಳ್ಯದಲ್ಲಿ, ನಿರ್ಮಾಣ ಹಂತದ ಅನಧಿಕೃತ ಕಟ್ಟಡ ಕುಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವಂತೆ ಡಿಸಿಎಂ ಡಿಕೆಶಿ ಆದೇಶ ನೀಡಿದ್ದು, ಅದರಂತೆ ಸರ್ವೆ ನಡೆಸಿ ಅಕ್ರಮ ಕಟ್ಟಡಗಳನ್ನು ಕೆಡವಲು ಬಿಬಿಎಂಪಿ ಮುಂದಾಗಿದೆ.

ಇದರ ಭಾಗವಾಗಿ ನಿನ್ನೆ ಮಹದೇವಪುರ ವಲಯ ಹೊರಮಾವು ವ್ಯಾಪ್ತಿಯ ನಂಜಪ್ಪ ಗಾರ್ಡನ್ ನಲ್ಲಿ ಕಾರ್ಯಾಚರಣೆ ನಡೆದಿದೆ. ಪುಟ್ಟಪ್ಪ ಎಂಬುವರ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಕೆಡವಲಾಗಿದೆ. ಏಕೆಂದರೆ ಈ ಕಟ್ಟಡವು 10 X 25 ರಷ್ಟು ಅಡಿಯಲ್ಲಿ 5 ಅಂತಸ್ತಿನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈ ಕಟ್ಟಡವು ಬಿರುಕು ಬಿಟ್ಟಿತ್ತು. ಹೀಗಾಗಿ ಇದನ್ನು ಹೊಡೆದು ಬಿಸಾಕಲಾಗ್ತಿದೆ.

ಇನ್ನು ಹೆಚ್.ಎ.ಎಲ್ ವಾರ್ಡ್ ಇಸ್ಲಾಂಪುರದಲ್ಲಿ ಶ್ರೀರಾಂ ಎಂಬ ಮಾಲೀಕರ ನೆಲಮಹಡಿ ಹಾಗೂ ಮೊದಲಹಡಿಯು ಹಳೆಯ ಕಟ್ಟಡವಾಗಿದ್ದು, ಶಿಥಿಲಾವಸ್ಥೆಯಲ್ಲಿರುವ ಕಾರಣ ಮನೆಯಲ್ಲಿದ್ದ ಸಾಮಗ್ರಿಗಳನ್ನೆಲ್ಲಾ ತೆಗೆದು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಇದೇ ರೀತಿ ಬೆಂಗಳೂರಲ್ಲಿ ಅಕ್ರಮವಾಗಿ ಕಟ್ಟಲಾಗಿರುವ ಕಟ್ಟಡಗಳು ಹಾಗೂ ಅನಧಿಕೃತ ಕಟ್ಟಡಗಳನ್ನು ಪಟ್ಟಿ ಮಾಡಿ ತೆರವು ಮಾಡಲು ಬಿಬಿಎಂಪಿ ಮುಂದಾಗಿದೆ.