ದೇಶ

MS Dhoni:ಗೆಳೆಯರ ಜೊತೆ ಧೋನಿ ಜಾಲಿ ಜಾಲಿ, ಫುಟ್​​ಬಾಲ್​ ಪಂದ್ಯ ವೀಕ್ಷಣೆ..

ಧೋನಿ ತಮ್ಮ ಸ್ನೇಹಿತರ ಜತೆ ಅತ್ಯಂತ ಸ್ಟೈಲೀಸ್ ಲುಕ್‌ನಲ್ಲಿ ಗ್ಯಾಲರಿಯಲ್ಲಿ ಕುಳಿತು ಫುಟ್​ಬಾಲ್‌ ಪಂದ್ಯ ವೀಕ್ಷಿಸುತ್ತಿರುವ ಫೋಟೊ ಕಂಡ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ.

ನ್ಯೂಯಾರ್ಕ್‌: ಟೀಮ್‌ ಇಂಡಿಯಾದ ಮಾಜಿ ನಾಯಕ ಹಾಗೂ ಆಟಗಾರ ಎಂಎಸ್‌ ಧೋನಿ ಫುಟ್ಬಾಲ್‌ ಎಂದರೆ ಅಚ್ಚುಮೆಚ್ಚು. ಕ್ರಿಕೆಟ್‌ಗೆ ಬರುವ ಮುನ್ನ ಧೋನಿ ಗೋಲ್‌ ಕೀಪರ್‌ ಆಗಿದ್ದರು ಅನ್ನೋದು ನಮಗೆಲ್ಲ ಗೊತ್ತೇ ಇದೆ. ಭಾರತ ತಂಡದ ಪರ ಆಡುತ್ತಿದ್ದ ವೇಳೆಯೂ ಧೋನಿ ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಾಗಿ ಸ್ನೇಹಿತರ ಜತೆ ಫುಟ್ಬಾಲ್‌ ಆಡುತ್ತಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಧೋನಿ ಫುಟ್ಬಾಲ್‌ ಆಡುವುದನ್ನು ನಿಲ್ಲಿಸಿದ್ರೂ ಕೂಡ ಫುಟ್ಬಾಲ್‌ ಮೇಲಿನ ಕ್ರೇಜ್‌ ಮಾತ್ರ ಕಮ್ಮಿಯಾಗಿಲ್ಲ ಅನ್ನೋದಕ್ಕೆ ಈ ಫೋಟೋನೇ ಸಾಕ್ಷಿ. ಧೋನಿ ತಮ್ಮ ಗೆಳೆಯರ ಜತೆ ಅಮೆರಿಕದಲ್ಲಿ ನಡೆಯುತ್ತಿರುವ ಫುಟ್ಬಾಲ್‌ ಟೂರ್ನಿಯ ಪಂದ್ಯವೊಂದನ್ನು ತಮ್ಮ ಗೆಳೆಯರ ಜೊತೆ ವೀಕ್ಷಿಸಿದ್ದಾರೆ. ಈ ಫೋಟೊ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್‌ ಆಗಿದೆ.



ಧೋನಿ ತಮ್ಮ ಸ್ನೇಹಿತರ ಜತೆ ಅತ್ಯಂತ ಸ್ಟೈಲೀಸ್ ಲುಕ್‌ನಲ್ಲಿ ಗ್ಯಾಲರಿಯಲ್ಲಿ ಕುಳಿತು ಫುಟ್ಬಾಲ್‌ ಪಂದ್ಯ ವೀಕ್ಷಿಸುತ್ತಿರುವ ಫೋಟೊ ಕಂಡ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಕೆಲ ದಿನಗಳ ಹಿಂದೆ ಧೋನಿ ತಮ್ಮ ಸ್ನೇಹಿತರ ಜತೆ ಬ್ಯಾಡ್ಮಿಂಟನ್ ಆಡುತ್ತಿರುವ ವಿಡಿಯೊವೊಂದು ವೈರಲ್‌ ಆಗಿತ್ತು. ಧೋನಿಯ ರಾಕೆಟ್ ವೇಗದ ಜಂಪಿಂಗ್ ಸ್ಮ್ಯಾಶ್(jump smash) ಕಂಡು ಅಭಿಮಾನಿಗಳು ದಂಗಾಗಿದ್ದರು. 43ರ ಅಸುಪಾಸಿನಲ್ಲಿರೋ ಧೋನಿಯ ಫಿಟ್ನೆಸ್ ಮೆಚ್ಚಲೇ ಬೇಕು ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.