ದೇಶ

ಮೋಸಮಾಡಲೆಂದು ನೀನು ಬಂದೆಯಾ..8 ಗಂಟೆಗಳ ಕಾಲ ಶವದ ಪಕ್ಕದಲ್ಲೇ ಕುಳಿತ ಪ್ರೆಯಸಿ

ಮಹಿಳೆ 2018ರಲ್ಲಿ ಗಂಡನಿಂದ ದೂರವಾಗಿದ್ದಳು. ಈತನ ಜೊತೆಗೆ ಸಹ ಜೀವನಕ್ಕೆ ಮಂದಾದರು. ಇದಾಗಿ ನಾಲ್ಕು ಮಕ್ಕಳನ್ನು ಅತ್ತೆ ಮನೆಗೆ ಬಿಟ್ಟಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಈತನನ್ನು ತೊರೆದ ಮಹಿಳೆ ಮತ್ತೊಬ್ಬನ ಜೊತೆಗೆ ಸಹ ಜೀವನಕ್ಕೆ ಮುಂದಾದರು.

ಮಹಿಳೆಯೊಬ್ಬಳು ಲಿವ್ ಇನ್ ಸಂಗಾತಿಯನ್ನೇ ಸ್ಕ್ರೂ ಡ್ರೈವರ್ ಹಾಗೂ ಸುತ್ತಿಗೆಯಿಂದ ಹತ್ಯೆ ಮಾಡಿ, ಶವದ ಜೊತೆ 8ಗಂಟೆಗಳ ಕಾಲ ಸಮಯ ಕಳೆದ ದಾರುಣ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ.  ನವದೆಹಲಿಯ ಭಲ್ಸವ್ ಡೈರಿ ಪೊಲೀಸ್ ಠಾಣೆ ವ್ಯಾಪ್ತಿಯ ಮುಕುಂದಪುರ್ನಲ್ಲಿ ನಡೆದಿದೆ.

ಲಿವ್ ಇನ್ ಸಂಗಾತಿಯನ್ನು ಕೊಂದು 8 ಗಂಟೆ ಕಾಲ ಶವದ ಪಕ್ಕದಲ್ಲೇ ಕುಳಿತ ಮಹಿಳೆ!

ಮಹಿಳೆ 2018ರಲ್ಲಿ ಗಂಡನಿಂದ ದೂರವಾಗಿದ್ದಳು. ಈತನ ಜೊತೆಗೆ ಸಹ ಜೀವನಕ್ಕೆ ಮಂದಾದರು. ಇದಾಗಿ ನಾಲ್ಕು ಮಕ್ಕಳನ್ನು ಅತ್ತೆ ಮನೆಗೆ ಬಿಟ್ಟಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಈತನನ್ನು ತೊರೆದ ಮಹಿಳೆ ಮತ್ತೊಬ್ಬನ ಜೊತೆಗೆ ಸಹ ಜೀವನಕ್ಕೆ ಮುಂದಾದರು. ಇದು ಇವರಿಬ್ಬರ ಜಗಳಕ್ಕೆ ಕಾರಣವಾಗಿ ಕೊಲೆ ಮಾಡುವ ಹಂತಕ್ಕೆ ಹೋಗಿದೆ.

ಈ ಪ್ರಕರಣ ಕುರಿತು ಮಾತನಾಡಿದ ಪೊಲೀಸರು, ಮಹಿಳೆಯು ವ್ಯಕ್ತಿಗೆ ದೇಹವನ್ನು ಸ್ಕ್ರೂಡ್ರೈವರ್ ನಿಂದ ಇರಿದು ಕೊಂದಿದ್ದಾರೆ. ಆತನ ಸಾವಿನ ಬಳಿಕವೂ 8 ಗಂಟೆಗಳ ಕಾಲ ಶವದ ಪಕ್ಕವೇ ಕುಳಿತ ಕಾಲ ಕಳೆದಿದ್ದಾರೆ. ಬಳಿಕ ರಾತ್ರಿ ಸಮಯದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.