ಬೆಂಗಳೂರು: ಈಗಷ್ಟೇ ಅಯೋಗ್ಯ2 ಸಿನಿಮಾ ಸೆಟ್ಟೇರಲು ತಯಾರಿಸಿ ನಡೆಸಿದೆ ಚಿತ್ರತಂಡ. ಇದಕ್ಕೂ ಮೊದಲೇ ಚಿತ್ರದ ನಿರ್ದೇಶಕ ಅಯೋಗ್ಯ 2 ಸಿಕ್ವೀಲ್ ಮುಹೂರ್ತಕ್ಕೂ ಮುಂಚಿತವಾಗಿಯೇ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿ ಗೆ ಮಾತನಾಡಿದ ನಿರ್ದೇಶಕ ಮಹೇಶ್ ಅವರು, ಅಯೋಗ್ಯ2 ಸಿನಿಮಾ ಬಿಗ್ ಬಜೆಟ್ ಸಿನಿಮಾ, ಇದಕ್ಕೆ ರಚಿತಾ ಹಾಗೂ ಸತೀಶ್ ಸಂಭಾವನೆ ಕೂಡ ದೊಡ್ಡದಾಗಿದೆ. ಕನ್ನಡ ನಟಿ ಮಣಿಯರಲ್ಲಿ No1 ಸಂಭಾವನೆ ಪಡೀತಿರೋ ಏಕೈಕ ನಟಿ ರಚಿತಾ ರಾಮ್ ಎಂದರು.. ಸತೀಶ್ ಹಾಗು ರಚಿತಾ ಇದ್ರೇನೆ ಅಯೋಗ್ಯ 2 ಇಲ್ಲ ಅಂದ್ರೆ ಈ ಸಿನಿಮಾ ಮಾಡ್ತಾನೆ ಇರ್ಲಿಲ್ಲ. ಅಯೋಗ್ಯ 2 ನನಗೆ ಎಮೋಷನ್, ಪ್ರೇಕ್ಷಕರಿಗೆ ಡಬಲ್ ಎಂಟರ್‌ಟೈನ್‌ಮೆಂಟ್ ಸಿಗೋದು ಪಕ್ಕಾ ಎಂದು ಹೇಳಿದರು. ಇನ್ನು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ರಿಲೀಸ್ ಗೆ ಮಾಡಲು ಸಿನಿಮಾ ತಂಡ ಪ್ಲಾನ್ ಮಾಡ್ತಾಯಿದ್ದು, 2025 ಆಗಸ್ಟ್ 15ಕ್ಕೆ ಅಯೋಗ್ಯ 2 ರಿಲೀಸ್ ಆಗುತ್ತೆ ಅಂತ ತಿಳಿಸಿದ್ರು.