ದೇಶ

ಮಹಾಕುಂಭಮೇಳ ಆರಂಭ.. ʼತ್ರಿವೇಣಿʼ ಸಂಗಮದಲ್ಲಿ ಭಕ್ತರ ಪುಣ್ಯಸ್ನಾನ

ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯಲಿದ್ದು, ಇಲ್ಲಿ ಸ್ನಾನ ಮಾಡಿದ್ರೆ, ಪಾಪನಾಶ, ಮೋಕ್ಷ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ.. ಮಹಾಕುಂಭ ಮೇಳದಲ್ಲಿ 6 ಶಾಹಿ ಸ್ನಾನ ನಡೆಯಲಿದೆ.. ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು ಸಾಧು-ಸಂತರು, ನಾಗಸಾಧುಗಳು, ಅಘೋರಿಗಳು ಭಾಗಿಯಾಗಿದ್ದಾರೆ..

ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾ ಕುಂಭಮೇಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇಂದಿನಿಂದ ಆರಂಭವಾಗಿದೆ.. 144 ವರ್ಷಗಳಿಗೊಮ್ಮೆ ಈ ಮಹಾ ಕುಂಭಮೇಳ ನಡೆಯಲಿದೆ.. ಮಹಾಶಿವರಾತ್ರಿಯಂದು ಜನವರಿ 13 ರಿಂದ ಫೆಬ್ರವರಿ 26, 2025ರಂದು ಅಂದರೆ ಪುಷ್ಯ ಪೂರ್ಣಿಮಾ ಅಂದರೆ ಹೊಸ ವರ್ಷದ ಮೊದಲ ಹುಣ್ಣಿಮೆಯ ದಿನದಂದು ಮಹಾ ಕುಂಭಮೇಳ ಕೊನೆಗೊಳ್ಳುತ್ತದೆ.. ಕುಂಭಮೇಳಕ್ಕೆ ಸುಮಾರು 40 ಕೋಟಿಗೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದೆ..

ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲಿ ಪುಣ್ಯ ಸ್ನಾನ ನಡೆಯಲಿದ್ದು, ಇಲ್ಲಿ ಸ್ನಾನ ಮಾಡಿದ್ರೆ, ಪಾಪನಾಶ, ಮೋಕ್ಷ ಸಿಗುತ್ತದೆ ಎಂಬುದು ಭಕ್ತರ ನಂಬಿಕೆ.. ಮಹಾಕುಂಭ ಮೇಳದಲ್ಲಿ 6 ಶಾಹಿ ಸ್ನಾನ ನಡೆಯಲಿದೆ.. ಮಹಾ ಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು ಸಾಧು-ಸಂತರು, ನಾಗಸಾಧುಗಳು, ಅಘೋರಿಗಳು ಭಾಗಿಯಾಗಿದ್ದಾರೆ.. ಈ ಹಿಂದೆ 2013ರಲ್ಲಿ ಮಹಾ ಕುಂಭಮೇಳ ನಡೆದಿತ್ತು.. ಇದೀಗ 2025ರ ಜ.13ರಿಂದ ಆರಂಭವಾಗಿದೆ.. ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಭಾರತೀಯರಷ್ಟೇ ಅಲ್ಲದೇ ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ.. ರಷ್ಯಾದ ಮಹಿಳಾ ಭಕ್ತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭಾರತ ಒಂದು ಮಹಾನ್ ದೇಶ.. ನಾವು ಮೊದಲ ಬಾರಿಗೆ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದೇವೆ. ಇಲ್ಲಿ ನಾವು ನಿಜವಾದ ಭಾರತವನ್ನು ನೋಡಬಹುದು.. ನಿಜವಾದ ಶಕ್ತಿ ಭಾರತದ ಜನರಲ್ಲಿದೆ.. ಈ ಪವಿತ್ರ ಸ್ಥಳದ ಜನರ ಕಂಪನದಿಂದಾಗಿ ನಾನು ನಡುಗುತ್ತಿದ್ದೇನೆ.. ನಾನು ಭಾರತವನ್ನು ಪ್ರೀತಿಸುತ್ತೇನೆ ಎಂದಿದ್ದಾರೆ..