ನಿಮ್ಮ ಹಣ ಡಬಲ್ ಮಾಡಿಕೊಡ್ತೀನಿ ಎಂದು ಅಮಾಯಕರಿಗೆ ಮಕ್ಮಲ್ ಟೋಪಿ ಹಾಕಿದ್ದ ಪ್ರಕರಣ ಸಂಬಂಧ, ಬೆಂಗಳೂರಿನ ಹಲಸೂರು ಗೇಟ್ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಸುಳ್ಳು ಹೇಳಿ ಎರಡು ಕೋಟಿ ಹಣ ವಂಚಿಸಿದ್ದ ಶ್ಯಾಮ್ ಥಾಮನಸ್, ಜೋಸ್ ಕುರುವಿಲ್ಲ, ಜೀನ್ ಕಮಲ್, ಜಾಫರ್ ಸಾದಿಕ್@ ದೀಪಕ್, ವಿಜಯ್ ಚಿಪ್ಲೋಂಕರ್@ ದೀಪಕ್, ಅಮಿತ್ @ದೀಪಕ್, ಊರ್ವಶಿ ಗೋಸ್ವಾಮಿ @ಸೋನು ಎಂಬುವರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳಿಂದ 44 ಲಕ್ಷ ಹಣ ವಶಕ್ಕೆ ಪಡೆಯಲಾಗಿದೆ.
MEDC ಅಂದ್ರೆ ಮಲೇಶಿಯಾ ಡೆವಲಪ್ಮೆಂಟ್ ಬೋರ್ಡ್ ನಕಲಿ ಕಂಪನಿ ಹೆಸರೇಳಿ ವಂಚನೆ ಮಾಡಲಾಗಿದೆ. ಕಂಪನಿಯಲ್ಲಿ ಹಣ ಹೂಡಿದರೆ ಹಣ ಡಬಲಿಂಗ್ ಮಾಡಿ ಕೊಡುವುದಾಗಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಬಿಡಬ್ಲ್ಯೂಡಿ ಕಾಂಟ್ರಾಕ್ಟರ್ ನವೀನ್ ಜೆ ಎಂಬಾತನಿಗೆ, ಮಲೇಶಿಯಾದಿಂದ ವಂಚನೆ ನಡೆಸಿದ್ದಾರೆ ಎನ್ನಲಾಗಿದೆ. ಮಧ್ಯವರ್ತಿಗಳ ಮೂಲಕ ಡೀಲ್ ಮಾಡಿಸುತ್ತಿದ್ದ ವಿಕ್ಕಿ ಅಹುಜಾ ಎಂಬಾತ, ಮೊದಲಿಗೆ ಹಣ ಇರುವವರನ್ನು ಟಾರ್ಗೆಟ್ ಮಾಡುತ್ತಿದ್ದ. ಆಮೇಲೆ ಮಲೇಷಿಯಾ ಕಂಪನಿಗೆ ಹಣ ಹೂಡುವಂತೆ ಆಮಿಷ ಒಡ್ಡುತ್ತಿದ್ದರು. ನಗದು ಹಣ ಕೊಟ್ಟರೆ ಕೊಟ್ಟ ಹಣಕ್ಕೆ ಡಬಲ್ ಹಣ ಆರ್‌ಟಿಜಿಎಸ್ ಮಾಡೋದಾಗಿ ನಂಬಿಸ್ತಿದ್ರು. ನಗರತ್ ಪೇಟೆಯಲ್ಲಿ ಕಚೇರಿ ತೆರೆದಿದ್ದ ಆಸಾಮಿಗಳು, ಎರಡು ಕೋಟಿ ಹಣ ನಗರತ್ ಪೇಟೆಯಲ್ಲಿ ನವೀನ್ ನಿಂದ ಪಡಿದಿದ್ರು.
ಪ್ರಾರಂಭಿಕವಾಗಿ ಒಂದು ಲಕ್ಷ ಹಣ ಆರ್‌ಟಿಜಿಎಸ್ ಮಾಡಿದ್ರು. ಬಳಿಕ ಈ ಕಚೇರಿಯಲ್ಲಿ ಲಾಕರ್ ಇಲ್ಲ. ಬೇರೆ ಕಚೇರಿಯಲ್ಲಿ ಹಣ ಇಡೋದಾಗಿ ಹೇಳಿ ದುಡ್ಡು ತೆಗೆದುಕೊಂಡು ಹೋಗಿದ್ರು. ಹೀಗೆ ಹೋದವರು ಮತ್ತೆ ವಾಪಸ್ಸು ಆಗಲೇ ಇಲ್ಲ. ಮೋಸ ಹೋದ ವಿಚಾರ ತಿಳಿದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದೀಗ ಹಲಸೂರು ಗೇಟ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.