ಕರ್ನಾಟಕ

ಕಂಟ್ರಾಕ್ಟ್‌ ಕೆಲಸದ ಹಣ ಬಿಡುಗಡೆ ಮಾಡೋಕೆ ಇವರ ಬಳಿ ಹಣವಿಲ್ಲ; ಅಶ್ವತ್ಥನಾರಾಯಣ..!

ಕಂಟ್ರಾಕ್ಟ್‌ ಹಣ ಬಿಡುಗಡೆಗೆ ಸಚಿವರಿಗೆ ಪತ್ರ ಸಲ್ಲಿಸಿರುವ ವಿಚಾರದ ಬಗ್ಗೆ, ಶಾಸಕ ಅಶ್ವತ್ಥ ನಾರಾಯಣ್‌ ಪ್ರತಿಕ್ರಿಯೆ ನೀಡಿದ್ದಾರೆ.

ಕಂಟ್ರಾಕ್ಟ್‌ ಹಣ ಬಿಡುಗಡೆಗೆ ಸಚಿವರಿಗೆ ಪತ್ರ ಸಲ್ಲಿಸಿರುವ ವಿಚಾರದ ಬಗ್ಗೆ, ಶಾಸಕ ಅಶ್ವತ್ಥ ನಾರಾಯಣ್‌ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಕುರ್ಚಿಯೇ ಅಲುಗಾಡುತ್ತಿದೆ. ಇರೋರೆಲ್ಲ ಸಿಎಂ ರೀತಿ ವರ್ತಿಸುತ್ತಿದ್ಧಾರೆ ಎಂದು ಟೀಕೆ ಮಾಡಿದ್ದಾರೆ. ಅಲ್ಲದೇ ಕಂಟ್ರಾಕ್ಟರ್‌ಗಳು ಮಾಡಿರುವ ಕೆಲಸದ ಹಣ ಬಿಡುಗಡೆ ಮಾಡಿಲ್ಲ. ಬಿಡುಗಡೆ ಮಾಡಲು ಇವರ ಬಳಿ ಹಣವೇ ಇಲ್ಲ. LOC ಪ್ರಕಾರ ಹಣ ಬಿಡುಗಡೆ ಮಾಡಬೇಕು. ಆದ್ರೆ ಆ ರೀತಿ ಯಾವುದೇ ಕೆಲಸ ಇವರು ಮಾಡುತ್ತಿಲ್ಲ.. ದಿನ ಬೆಳಗಾದ್ರೆ ನಾನೇ ಸಿಎಂ, ನಾನೇ ಸಿಎಂ ಅಂತ ಹೇಳಿಕೊಂಡು ಓಡಾಡ್ತಿದ್ದಾರೆ..ಕಂಟ್ರಾಕ್ಟರ್‌ಗಳು 60% ಆರೋಪ ಮಾಡಿದ್ದಾರೆ..ಸರ್ಕಾರ ಮೊದಲು ಸಮರ್ಪಕವಾಗಿ ಕೆಲಸ ಮಾಡಲಿ ಅಂತ ಆಗ್ರಹಿಸಿದ್ದಾರೆ.