ಈತನ ಮುಖವನ್ನ ನೀವು ಮರೆತಿಲ್ಲ ಅನಿಸುತ್ತೆ.. ಅದು ಟಿಕ್‌ಟಾಕ್ ಪೀಕ್‌ನಲ್ಲಿದ್ದ ಟೈಮ್.. ಎಲ್ಲಿ ನೋಡಿದ್ರೂ ಈತನ ವಿಡಿಯೋಗಳದ್ದೇ ಹಾವಳಿ ಆಗಿತ್ತು.. ಮೂಲತಃ ಆಂಧ್ರಪ್ರದೇಶದ ವಿಶಾಖಪಟ್ಟಣಂಗೆ ಸೇರಿದ್ದ ಈತ ಸೌತ್ ಇಂಡಿಯಾದಲ್ಲಿ ಹವಾ ಸೃಷ್ಟಿಸಿದ್ದ.. ಯೂಟ್ಯೂಬ್ ಚಾನೆಲ್ ಮೂಲಕವೂ ತನ್ನ ಕಾಮಿಡಿ ವಿಡಿಯೋಗಳ ಮೂಲಕ ಈ ಫನ್ ಬಕೆಟ್ ಭಾರ್ಗವ್ ನೇಮ್-ಫೇಮ್ ಪಡೆದಿದ್ದ.. ತನ್ನ ಮ್ಯಾನಿರಿಸಂನಿಂದಲೇ ಹೆಸರುಗಳಿದ್ದವನು ಇದೀಗ ಬಂದಲ್ಲ.. ಎರಡಲ್ಲ.. ಬರೋಬ್ಬರಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ..
ಹೌದು.. ಕಾಮಿಡಿ ವಿಡಿಯೋ ಮೂಲಕ ಜನರ ಎದುರು ಬರ್ತಿದ್ದವ ಒಳಗೊಬ್ಬ ರಕ್ಕಸನಿದ್ದ.. ಅದು 2021.. ಟಿಕ್‌ಟಾಕ್ ವಿಡಿಯೋ ಮಾಡುವ ಹೆಸರಿನಲ್ಲಿ 14 ವರ್ಷದ ಬಾಲಕಿಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದ.. ಅಷ್ಟೇ ಅಲ್ಲ ಈ ವಿಷಯದ ಬಗ್ಗೆ ಯಾರಿಗಾದರೂ ಹೇಳಿದ್ರೆ ವೈಯಕ್ತಿಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಿಡೋದಾಗಿ ಬೆದರಿಕೆ ಕೂಡ ಹಾಕಿದ್ದ.. ಹೀಗೆ ಬೆದರಿಕೆಗೆ ಹೆದರಿದ್ದ ಅಪ್ತಾಪ್ತೆ,, ಭಯದಲ್ಲಿಯೇ ಒದ್ದಾಡಿದ್ದಳು.. ನಂತರ ಬಾಲಕಿ ಗರ್ಭಿಣಿಯಾದ ಆದ್ಮೇಲೆ ಇಡೀ ಘಟನೆ ಬೆಳಕಿಗೆ ಬಂದಿತ್ತು.. ಈ ಬಗ್ಗೆ ಕುಟುಂಬಸ್ಥರು ದೂರು ನೀಡ್ತಿದ್ದಂತೆ ಭಾರ್ಗವ್‌ನ ಪೋಕ್ಸೋ ಪ್ರಕರಣದ ಅಡಿಯಲ್ಲಿ ಬಂಧಿಸಲಾಗಿತ್ತು.. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದೆ..
ಅಪ್ರಾಪ್ತ ಬಾಲಕಿಯ ಮೇಲೆ ರಕ್ಕಸನಂತೆ ಎರಗಿದ್ದ ಕಾಮುಕನಿಗೆ ಇದೀಗ ವಿಶಾಖಪಟ್ಟಣಂನ ವಿಶೇಷ ಪೋಕ್ಸೋ ನ್ಯಾಯಾಲಯದ ಘನಘೋರ ಶಿಕ್ಷೆಯನ್ನೇ ವಿಧಿಸಿದೆ.. ಚಿಪ್ಪದ ಭಾರ್ಗವ್ ಅಲಿಯಾಸ್ ‘ಫನ್ ಬಕೆಟ್ ಭಾರ್ಗವ್’ಗೆ ಬರೋಬ್ಬರಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.. ಅಷ್ಟೇ ಅಲ್ಲ.. ನ್ಯಾಯಾಲಯವು ಅಪರಾಧಿಗೆ ಬರೋಬ್ಬರಿ 4 ಲಕ್ಷ ರೂಪಾಯಿಗಳ ದಂಡ ವಿಧಿಸಿದೆ.. ಇದನ್ನು ಸಂತ್ರಸ್ತ ಬಾಲಕಿಗೆ ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದೆ.. ಸೋಷಿಯಲ್ ಮೀಡಿಯಾ ಮೂಲಕ 20 ಹರೆಯದಲ್ಲಿಯೇ ದೊಡ್ಡ ಹೆಸರು ಮಾಡಿದ್ದ ಭಾರ್ಗವ್, ಮಾಡಬಾರದ ಕೆಲಸ ಮಾಡಿ ಜೈಲು ಸೇರಿದ್ದಾನೆ..