ದೇಶ

ನನ್ನ ಮಗ ಯುವಿ ಮೃತಪಟ್ಟಿದ್ದರೂ ಹೆಮ್ಮೆ ಪಡುತ್ತಿದ್ದೆ - ಯೋಗರಾಜ್‌ ಸಿಂಗ್‌

2011ರ ಏಕದಿನ ವಿಶ್ವಕಪ್‌ ವೇಳೆ ತನ್ನ ಮಗ ಮೃತಪಟ್ಟಿದ್ದರೂ ನಾನು ಹೆಮ್ಮೆಪಡುತ್ತಿದ್ದೆ ಎನ್ನುವ ಮೂಲಕ ಮಾಜಿ ಕ್ರಿಕೆಟರ್‌ ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಅಚ್ಚರಿ ಮೂಡಿಸಿದ್ದಾರೆ..

2011ರ ಏಕದಿನ ವಿಶ್ವಕಪ್‌ ವೇಳೆ ತನ್ನ ಮಗ ಮೃತಪಟ್ಟಿದ್ದರೂ ನಾನು ಹೆಮ್ಮೆಪಡುತ್ತಿದ್ದೆ ಎನ್ನುವ ಮೂಲಕ ಮಾಜಿ ಕ್ರಿಕೆಟರ್‌ ಯುವರಾಜ್‌ ಸಿಂಗ್‌ ತಂದೆ ಯೋಗರಾಜ್‌ ಅಚ್ಚರಿ ಮೂಡಿಸಿದ್ದಾರೆ.. ನಮ್ಮ ದೇಶಕ್ಕಾಗಿ ಯುವರಾಜ್ ಸಿಂಗ್ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದರೆ ಮತ್ತು ಭಾರತ ವಿಶ್ವಕಪ್ ಗೆದ್ದಿದ್ದರೆ, ನಾನು ಹೆಮ್ಮೆಯ ತಂದೆಯಾಗುತ್ತಿದ್ದೆ.. ಈಗಲೂ ಅವರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ.. ಈ ವಿಚಾರವನ್ನು ಅವರಿಗೆ ದೂರವಾಣಿ ಮೂಲಕವೂ ಹೇಳಿದ್ದೇನೆ.. ಅವನು ರಕ್ತವನ್ನು ಉಗುಳಿದಾಗಲೂ ಅವನು ಆಡಬೇಕೆಂದು ನಾನು ಬಯಸುತ್ತೇನೆ.. ನಾನು ಅವನಿಗೆ ಹೇಳಿದೆ, ಚಿಂತಿಸಬೇಡ, ನೀನು ಸಾಯುವುದಿಲ್ಲ.. ಭಾರತಕ್ಕಾಗಿ ವಿಶ್ವಕಪ್ ಗೆಲ್ಲಿರಿ ಎಂದಿದ್ದೆ ಎಂದಿದ್ದಾರೆ.. ಕ್ಯಾನ್ಸರ್‌ನಿಂದ ಗುಣಮುಖರಾದ ಯುವರಾಜ್ ಸಿಂಗ್,, ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡಿದ್ದರೂ ಹಳೇ ಫಾರ್ಮಾಗೆ ಮರಳು ಸಾಧ್ಯವಾಗಲಿಲ್ಲ.. 2015ರ ವಿಶ್ವಕಪ್ ಮತ್ತು 2019ರ ವಿಶ್ವಕಪ್‌ಗೆ ಆಯ್ಕೆಯಾಗದ ಹಿನ್ನೆಲೆಯಲ್ಲಿ ಅಂತಿಮವಾಗಿ 2019ರಲ್ಲಿ ಯುವರಾಜ್‌ ಸಿಂಗ್‌ ನಿವೃತ್ತಿ ಘೋಷಿಸಿದ್ದರು.. ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಈ ಹಿಂದೆ ಯೋಗರಾಜ್ ಸಿಂಗ್ ಅವರು ನೀಡಿದ್ದ ಹೇಳಿಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದವು..