ಜೆಡಿಎಸ್‌ನಲ್ಲಿ ಪಕ್ಷದ ಹೊಸ ರಾಜ್ಯಾಧ್ಯಕ್ಷರ ಆಯ್ಕೆಯಾಗಬೇಕಿದ್ದು, ನಿಖಿಲ್ ಕುಮಾರಸ್ವಾಮಿ ಅವರಿಗೇ ಪಟ್ಟ ಕಟ್ಟಲಾಗುತ್ತೆ ಎಂಬ ಚರ್ಚೆ ಶುರುವಾಗಿದೆ. ನಿನ್ನೆ ಹೆಚ್‌ಡಿಡಿ - ಹೆಚ್‌ಡಿಕೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎಲ್ಲರಿಂದ ಒಮ್ಮತದ ಆಗ್ರಹ ಕೇಳಿ ಬಂದಿದೆ. ಹಾಲಿ-ಮಾಜಿ ಶಾಸಕರು ಮುಖಂಡರಿಂದ ನಿಖಿಲ್ ಕುಮಾರಸ್ವಾಮಿ ಹೆಸರು ಸೂಚನೆ ಬಂದಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಅಸ್ತು ಎಂದಿದ್ದಾರೆ.
ಮಾರ್ಚ್‌ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ನಿಖಿಲ್ ಮುಂದಾಳತ್ವದಲ್ಲಿ ಸಂಘಟನೆ ಮಾಡಿ ಎಂದು ದೇವೇಗೌಡರು ಹೇಳಿದ್ದಾರೆ. ಅಲ್ಲದೇ ನಿಖಿಲ್ ಅವರ ನೇತೃತ್ವದಲ್ಲಿ ಮುನ್ನಡೆಯೋಣ ಎಂಬ ಸಂದೇಶವನ್ನು ಸಭೆಯಲ್ಲಿ ನೀಡಿದ್ದಾರೆ..ಮಾರ್ಚ್‌ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಚುನಾವಣೆ ಹಿನ್ನೆಲೆ, ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡರು ರಾಜ್ಯ ಪ್ರವಾಸ ಮಾಡಲಿದ್ದಾರೆ.