ಜೆಡಿಎಸ್ ಸಭೆಯಿಂದ ದೂರ ಉಳಿದಿದ್ದ ಮಾಜಿ ಸಚಿವ ಜಿ.ಟಿ.ದೇವೇಗೌಡರನ್ನು, ನಾನೇ ಮಾತನಾಡಿಸುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ. ಅವರನ್ನು ನಾನೇ ಕರೆಸುತ್ತೇನೆ. ಇಲ್ಲವೇ ನಾನೇ ಹೋಗಿ ಭೇಟಿ ಮಾಡಿ ಅಸಮಾಧಾನ ತಣಿಸುತ್ತೇನೆ. ಅವರ ಮಗನಿಗೂ ಸೂಕ್ತ ಸ್ಥಾನ ನೀಡಬೇಕಿದೆ ಎಂದು ದೇವೇಗೌಡರು ಹೇಳಿದ್ದಾರೆ.