ವಿದೇಶ

ಮಕ್ಕಳ ನೆಚ್ಚಿನ ಕಾರ್ಟೂನ್ ಚಾನೆಲ್ ಡಿಸ್ನಿಗೆ 101 ವರ್ಷದ ಸಂಭ್ರಮ..!

ಡಿಸ್ನಿ ಬ್ರದರ್ಸ್ ಕಾರ್ಟೂನ್ ಸ್ಟುಡಿಯೋ ಎಂಬ ಹೆಸರಿನಲ್ಲಿ ವಾಲ್ಟ್ ಡಿಸ್ನಿ ಮತ್ತು ರಾಯ್ ಆಲಿವರ್ ಡಿಸ್ನಿಯವರು ಮಕ್ಕಳನ್ನ ರಂಜಿಸುವ ಸಲುವಾಗಿ ಈ ಕಾರ್ಟೂನ್​ ಚಾನೆಲ್​ ತೆರೆದರು.

ಮಕ್ಕಳ ಅಚ್ಚು-ಮೆಚ್ಚಿನ ಖ್ಯಾತ ಕಾರ್ಟೂನ್ ಚಾನೆಲ್ ಅಂದ್ರೆ ಅದು ಡಿಸ್ನಿ. ಮಕ್ಕಳಲ್ಲದೇ ವಯಸ್ಕರನ್ನೂ ರಂಜಿಸುತ್ತಿದ್ದ ಕಾರ್ಟೂನ್ ಚಾನಲ್ಗೆ ಇಂದಿಗೆ 101 ವರ್ಷ ತುಂಬಿದೆ. ಅಕ್ಟೋಬರ್ 16, 1923 ರಂದು ಇಬ್ಬರು  ಸಹೋದರರು ಈ ಡಸ್ನಿ ಕಾರ್ಟೂನ್ ಚಾನೆಲ್ ಅನ್ನ ಆರಂಭಿಸಿದರು. ಡಿಸ್ನಿ ಬ್ರದರ್ಸ್ ಕಾರ್ಟೂನ್ ಸ್ಟುಡಿಯೋ ಎಂಬ ಹೆಸರಿನಲ್ಲಿ  ವಾಲ್ಟ್ ಡಿಸ್ನಿ ಮತ್ತು ರಾಯ್ ಆಲಿವರ್ ಡಿಸ್ನಿಯವರು ಮಕ್ಕಳನ್ನ ರಂಜಿಸುವ ಸಲುವಾಗಿ ಈ ಕಾರ್ಟೂನ್ ಚಾನೆಲ್ ತೆರೆದರು. 

"ಆಲಿಸ್ ಕಾಮಿಡೀಸ್" ಎಂಬ ಅನಿಮೇಟೆಡ್ ಚಲನಚಿತ್ರ ಸರಣಿಯನ್ನು ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿದ ಸಹೋದರರು,1926 ರಲ್ಲಿ ಕಂಪನಿಯ ಹೆಸರನ್ನು ವಾಲ್ಟ್ ಡಿಸ್ನಿ ಸ್ಟುಡಿಯೋ ಎಂದು ಬದಲಾಯಿಸಿದರು. 1928ರಲ್ಲಿ, ಡಿಸ್ನಿ "ಸ್ಟೀಮ್ ಬೋಟ್ ವಿಲ್ಲಿ" ಬಿಡುಗಡೆಯೊಂದಿಗೆ ಮಿಕ್ಕಿ ಮೌಸ್ ಪಾತ್ರವನ್ನು ಪ್ರೇಕ್ಷಕರಿಗೆ ಪರಿಚಯಿಸಿದರು.