ಸ್ಪೆಷಲ್ ಸ್ಟೋರಿ

ಕರಿಬೇವು ನೀರನ ಲಾಭಗಳೇನು ಗೊತ್ತಾ..?

ಕರಬೇವು ಸೇವಿಸುವುದರಿಂದ ಬಹಳಷ್ಟು ಉಪಯೋಗಗಳಿವೆ. ಅದರಲ್ಲೂ ಪ್ರತಿದಿನ ಬೆಳಿಗ್ಗೆ ಕರಿಬೇವಿನ ಸೊಪ್ಪಿನ ನೀರು ಕುಡಿದ್ರೆ ಏನೆಲ್ಲಾ ಲಾಭಗಳಿವೆ ಎಂಬುವುದನನ್ನ ನಾವು ತಿಳಿಸುತ್ತೆವೆ ಬನ್ನಿ.

ಕರಬೇವು ಸೇವಿಸುವುದರಿಂದ ಬಹಳಷ್ಟು ಉಪಯೋಗಗಳಿವೆ. ಅದರಲ್ಲೂ ಪ್ರತಿದಿನ ಬೆಳಿಗ್ಗೆ ಕರಿಬೇವಿನ ಸೊಪ್ಪಿನ ನೀರು ಕುಡಿದ್ರೆ ಏನೆಲ್ಲಾ ಲಾಭಗಳಿವೆ ಎಂಬುವುದನನ್ನ ನಾವು ತಿಳಿಸುತ್ತೆವೆ ಬನ್ನಿ.
ದಕ್ಷಿಣ ಭಾರತದ ಅಡುಗೆಗಳಲ್ಲಿ ಕರಿಬೇವು ಧಾರಾಳವಾಗಿ ಬಳಸುತ್ತಾರೆ. ನಿಜಕ್ಕೂ ಕರಿಬೇವು ಔಷಧೀಯ ಗುಣಗಳಿಂದ ತುಂಬಿರುವ ಗಿಡ. ಹೊಟ್ಟೆ ಸಮಸ್ಯೆಗಳಿಗೆ ರಾಮಬಾಣ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
ಕರಿಬೇವಿನಲ್ಲಿ ಆ್ಯಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಕರಿ ಬೇವಿನ ಚಟ್ನಿ, ಪುಡಿ ಮಾಡಿಕೊಂಡು ತಿನ್ನಬಹುದು. ಇದು ರುಚಿಕರವೂ ಹೌದು. ಪ್ರತಿದಿನ ಬೆಳಿಗ್ಗೆ ಕರಿಬೇವಿನ ನೀರು ಕುಡಿದ್ರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಜೀರ್ಣಕ್ರಿಯೆ ಚೆನ್ನಾಗಿರುತ್ತೆ
ಬೆಳಿಗ್ಗೆ ಕರಿಬೇವಿನ ನೀರುನ್ನ ಸೇವಿಸುವುದರಿಂದ ಜೀರ್ಣಕ್ರೀಯೆ ಚೆನ್ನಾಗಿ ಆಗುತ್ತದೆ.  ಮಲಬದ್ಧತೆ ಸಮಸ್ಯೆ ಬೇಗ ಕಡಿಮೆಯಾಗುತ್ತೆ. 

ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು
ಆರೋಗ್ಯ ತಜ್ಞರ ಪ್ರಕಾರ ಕರಿಬೇವಿನ ನೀರು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ. ಕರಿಬೇವಿನ ನೀರು ದೇಹದಲ್ಲಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತೆ. ಹೃದಯದ ಸಮಸ್ಯೆಗಳನ್ನು ಕಡಿಮೆ ಮಾಡುತ್ತೆ.

ಚರ್ಮಕ್ಕೂ ಒಳ್ಳೆಯದು
ಕರಿಬೇವಿನ ನೀರಿನಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹೆಚ್ಚಿವೆ. ಚರ್ಮಕ್ಕೆ ತುಂಬಾ ಒಳ್ಳೆಯದು. ಪ್ರತಿದಿನ ಕರಿಬೇವಿನ ನೀರು ಕುಡಿದ್ರೆ ಚರ್ಮ ಹೊಳೆಯುತ್ತೆ, ತೇವಾಂಶ ಇರುತ್ತೆ. ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡುತ್ತೆ.

ತೂಕ ಇಳಿಸಲು ಸಹಾಯವಾಗುತ್ತದೆ
ತೂಕ ಇಳಿಸಿಕೊಳ್ಳೋಕೆ ಬಯಸುವವರಿಗೆ ಕರಿಬೇವಿನ ನೀರು ತುಂಬಾ ಸಹಾಯ ಮಾಡುತ್ತೆ. ಈ ನೀರು ಕುಡಿದ್ರೆ ತೂಕ ಇಳಿಯುತ್ತೆ. ಜೀರ್ಣಕ್ರಿಯೆ ಹೆಚ್ಚಾಗುತ್ತೆ. ತಿಂದ ಆಹಾರ ಬೇಗ ಜೀರ್ಣವಾಗುತ್ತೆ. ಬೇಗ ತೂಕ ಇಳಿಯುತ್ತೆ.

ಶುಗರ್ ಪ್ರಮಾಣ ನಿಯಂತ್ರದಲ್ಲಿರುತ್ತದೆ
ಕರಿಬೇವಿನ ನೀರು ಮಧುಮೇಹ ಇರೋರಿಗೆ ತುಂಬಾ ಒಳ್ಳೆಯದು. ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತೆ. ಸಕ್ಕರೆ ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗೋ ಸಾಧ್ಯತೆ ಕಡಿಮೆಯಾಗುತ್ತೆ.

ಕೂದಲ ಆರೋಗ್ಯಕ್ಕೆ ಬಹಳ ಒಳ್ಳೆಯದು
ಕರಿಬೇವಿನ ನೀರು ಕುಡಿಯುವುದರಿಂದ ಕೂದಲು ಆರೋಗ್ಯವಾಗಿರುತ್ತೆ. ಕರಿಬೇವಿನಲ್ಲಿ ಕಬ್ಬಿಣಾಂಶ ಹೆಚ್ಚಿದೆ. ಇದು ಕೂದಲನ್ನು ಬಲಪಡಿಸುತ್ತದೆ. ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಹೊಳೆಯುತ್ತೆ, ಕಪ್ಪಾಗಿರುತ್ತೆ, ಉದ್ದವಾಗಿ ಬೆಳೆಯುತ್ತದೆ.