ದೇಶ

ಕೊನೆಗೂ ಬಾಹ್ಯಾಕಾಶ ತಲುಪಿದ ಡ್ರ್ಯಾಗನ್ ನೌಕೆ.. ಸುನೀತಾ ವಿಲಿಯಮ್ಸ್, ವಿಲ್ಮೋರ್ ಭೂಮಿಗೆ ಬರೋದಷ್ಟೇ ಬಾಕಿ..!

ಭೂಮಿಗೆ ಹಿಂತಿರುಗಲಾರದೇ ಬಾಹ್ಯಾಕಾಶದಲ್ಲೇ ಸಿಲುಕಿದ್ದ, ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್​​​ ನ ಕರೆತರಲು ಉಡಾವಣೆಯಾದ, ಡ್ರ್ಯಾಗನ್ ನೌಕೆ ಯಶಸ್ವಿಯಾಗಿ ತಲುಪಿದೆ.

3 ತಿಂಗಳ ಹಿಂದೆ ಬಾಷ್ಯಾಕಾಶ ತಲುಪಿದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರಿಗೆ, ಯಾವುದೇ ಅಪಾಯ ಆಗಿಲ್ಲ ಎನ್ನುವುದೇ ಭಾರತೀಯರ ಸೌಭಾಗ್ಯ. ಆದ್ರೆ ಹೀಲಿಯಂ ಸೋರಿಕೆಯಿಂದ ಬಾಹ್ಯಾಕಾಶದಿಂದ ಭೂಮಿಗೆ ಬರಲಾಗದೇ ಇಷ್ಟುದಿನ ಒದ್ದಾಡಿದ್ದರು. ಆದ್ರೆ ಅವರನ್ನು ಕರೆತರಲು ಉಡಾವಣೆಯಾದ, ಸ್ಪೇಸ್ ಎಕ್ಸ್  ಕ್ರೂ-9 ‘ಡ್ರ್ಯಾಗನ್ನೌಕೆ ಯಶಸ್ವಿಯಾಗಿ ಬಾಹ್ಯಕಾಶವನ್ನು ತಲುಪಿದೆ.

ಬಾಹ್ಯಾಕಾಶದಲ್ಲೇ ಸಿಲುಕಿದ್ದವರನ್ನು ಕರೆತರಲು, ಗಗನಯಾತ್ರಿ ನಿಕ್  ಹೇಗ್  ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಅವರನ್ನು ಡ್ರ್ಯಾಗನ್ ನೌಕೆ ಬಾಹ್ಯಾಕಾಶಕ್ಕೆ ಕಳುಹಿಸಲಾಗಿತ್ತು. ನೌಕೆ ಕಂಡ ಕೂಡಲೇ ಸುನೀತಾ ವಿಲಿಯಮ್ಸ್ ಇಬ್ಬರನ್ನೂ ಸಂತಸದಿಂದ, ಅಪ್ಪಿಕೊಂಡು ಸ್ವಾಗತಿಸಿದ್ದಾರೆ.