ಸ್ಪೆಷಲ್ ಸ್ಟೋರಿ

ಡಯಾಬಿಟಿಸ್ ಗಳಿಗೆ ಅಗಸೆ ಕಾಳುಗಳು ರಾಮಬಾಣ. ಇದರ ವಿಶೇಷತೆ ಏನು ಗೊತ್ತಾ.?

ಅಗಸೆ ಬೀಜದಲ್ಲಿ ಕೊಬ್ಬಿನಾಮ್ಲಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಇದರ ಸೇವನೆಯಿಂದ ಶುಗರ್ ನಿಯಂತ್ರಿಸಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಅಗಸೆ ಕಾಳು ನೋಡಲು ಚಿಕ್ಕದಾಗಿರಬಹುದು. ಆದರೆ, ಇದು ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ.

ಅಗಸೆ ಬೀಜಗಳು ಲಾಭ ಮತ್ತು ಪ್ರಯೋಜನಗಳು ಕೇಳಿದ್ರೆ ಶಾಕ್ ಆಗೊದಂತೂ ಗ್ಯಾರಂಟಿ,  ಖಂಡಿತ ಇಂದೇ ಸೇವನೆ ಮಾಡುತ್ತೀರಿ. ಗುಣವಾಗದ ಕಾಯಿಲೆಗಳಿಗೆ ಅಗಸೆ ಬೀಜಗಳು ಮ್ಯಾಜಿಕ್ ತರಹ ಕೆಲಸ ಮಾಡುತ್ತವೆ.  ಹೃದಯಕ್ಕೆ ಒಳ್ಳೆಯದು. ಸಕ್ಕರೆ ಕಾಯಿಲೆಗೆ ಇದು ರಾಮಬಾಣವಾಗಿದೆ.ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಸಸ್ಯಧಾರಿತ ಪ್ರೋಟೀನ್ ಇದರಲ್ಲಿ ಇರುತ್ತದೆ.

Flaxseeds For Diabetes,ಅಗಸೆಬೀಜ ಸೇವಿಸೋದರಿಂದ ತೂಕ ಮಾತ್ರವಲ್ಲ ಶುಗರ್‌ ,  ಕೊಲೆಸ್ಟ್ರಾಲ್‌ ಕೂಡಾ ಕಡಿಮೆಯಾಗುತ್ತೆ - here is the flaxseeds benefits told by  dr.dixa bhavsar - Vijay Karnataka

ಅಗಸೆ ಬೀಜದಲ್ಲಿ ಕೊಬ್ಬಿನಾಮ್ಲಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಇದರ ಸೇವನೆಯಿಂದ ಶುಗರ್ ನಿಯಂತ್ರಿಸಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಅಗಸೆ ಕಾಳು ನೋಡಲು ಚಿಕ್ಕದಾಗಿರಬಹುದು. ಆದರೆ, ಇದು ಅನೇಕ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಇದು ಆಲ್ಫಾ-ಲಿನೋಲೆನಿಕ್ ಆಮ್ಲ ಸೇರಿದಂತೆ ಫೈಬರ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ.

ಅಗಸೆ ಬೀಜವನ್ನು  ತಿನ್ನುವುದರಿಂದ ಹಸಿವು ಕಡಿಮೆಯಾಗುತ್ತದೆ. ಊಟಕ್ಕೆ ಮುಂಚೆ ತೆಗೆದುಕೊಂಡಾಗ, ಜನರು ಕಡಿಮೆ ಹಸಿವು ಅನುಭವಿಸುತ್ತಾರೆ. ದೇಹವು ಆಹಾರದಿಂದ ಹೀರಿಕೊಳ್ಳುವ ಕೊಲೆಸ್ಟ್ರಾಲ್ ಪ್ರಮಾಣ ಮಿತಿಗೊಳಿಸಲು ಸಹ ಇದು ಸಹಾಯ ಮಾಡುತ್ತದೆ. ಲೂಪಸ್ ಇರುವವರಲ್ಲಿ ಮಲಬದ್ಧತೆ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಬೊಜ್ಜು ಮತ್ತು ಮೂತ್ರಪಿಂಡದ ಉರಿಯೂತಕ್ಕೆ ಅಗಸೆಬೀಜ ಬಳಸಬಹುದು. ಅಗಸೆ ಕಾಳುಗಳ ಎಣ್ಣೆಯು ವಿಭಿನ್ನ ಪರಿಣಾಮಗಳನ್ನು ಹೊಂದಿದೆ ಎಂದು ತಜ್ಞರು ಹೇಳುತ್ತಾರೆ.

ತೂಕ ನಷ್ಟ: ಕೆಲವು ಅಧ್ಯಯನಗಳ ಪ್ರಕಾರ, ಅಗಸೆ ಬೀಜ ತಿನ್ನುವುದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಅವಿಸೆಲೊ ಕರಗಬಲ್ಲ ಫೈಬರ್ ಅನ್ನು ಹೊಂದಿದ್ದು, ಇದು ಹೆಚ್ಚು ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಈ ರೀತಿಯಾಗಿ ಜೀರ್ಣಕ್ರಿಯೆ ಪ್ರಕ್ರಿಯೆಯು ಸುಗಮವಾಗುತ್ತದೆ ಮತ್ತು ಹೊಟ್ಟೆಯು ತುಂಬಿರುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟ: ಅಗಸೆ ಬೀಜಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ. ಆದಾಗ್ಯೂ, ಇಲ್ಲಿ ನೆನಪಿಡುವ ಒಂದು ವಿಷಯವೆಂದರೆ ಅಗಸೆಬೀಜದ ಬದಲಿಗೆ ಅಗಸೆಬೀಜದ ಎಣ್ಣೆಯನ್ನು ಬಳಸುವುದು ಈ ಪ್ರಯೋಜನಗಳನ್ನು ಒದಗಿಸುವುದಿಲ್ಲ.

ಬಿಪಿ ಕಡಿಮೆ ಮಾಡುತ್ತೆ: ಅಗಸೆ ಬೀಜಗಳನ್ನು ತಿನ್ನುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ದಿನಕ್ಕೆ 4 ಟೀಸ್ಪೂನ್ ಅಗಸೆ ಬೀಜಗಳನ್ನು ತಿನ್ನುವುದರಿಂದ ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು. ಇದರಿಂದ ಪಾರ್ಶ್ವವಾಯು ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಸಾಧ್ಯತೆ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಕ್ಯಾನ್ಸರ್ ಗೆ  ರಾಮ ಬಾಣ: ಈ ಬೀಜಗಳು ಲಿಗ್ನಾನ್ ಅನ್ನು ಹೊಂದಿರುತ್ತವೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಋತುಬಂಧದ ನಂತರ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಕೆಲವು ಅಧ್ಯಯನಗಳು ತೋರಿಸಿವೆ. ಇದಲ್ಲದೆ, ಪ್ರಾಣಿಗಳ ಮೇಲೆ ನಡೆಸಿದ ಅಧ್ಯಯನಗಳು ಈ ಅಗಸೆ ಬೀಜಗಳನ್ನು ತಿನ್ನುವುದರಿಂದ ಕರುಳಿನ, ಚರ್ಮ, ರಕ್ತ ಮತ್ತು ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯು ತಿಳಿಸುತ್ತದೆ.