ವಿದೇಶ

ನೈಜೀರಿಯಾ ಇಂಧನ ಟ್ಯಾಂಕರ್ ಬ್ಲಾಸ್ಟ್.. 120ರ ಗಡಿ ದಾಟಿದ ಸಾವಿನ ಸಂಖ್ಯೆ

ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್ ಪಲ್ಟಿಯಾದ ಬಳಿಕ, ಇಂಧನ ಹೊರ ಚೆಲ್ಲಿದ್ದು ಟ್ಯಾಂಕರ್ ಸ್ಫೋಟಗೊಂಡು ಸಾವನ್ನಪ್ಪಿದವರ ಸಂಖ್ಯೆ, 120ರ ಗಡಿ ದಾಟಿದೆ.

ನೈಜೀರಿಯಾದಲ್ಲಿ ಮಂಗಳವಾರ ಇಂಧನ ಟ್ಯಾಂಕರ್ ಸ್ಫೋಟಗೊಂಡು ಸಾವನ್ನಪ್ಪಿದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈವರೆಗೂ 120ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇದರ ಜೊತೆಗೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

ನೈಜೀರಿಯಾದ ತೌರಾ ಸ್ಥಳೀಯ ಸರ್ಕಾರಿ ಪ್ರದೇಶದ ಮಜಿಯಾ ಪಟ್ಟಣದಲ್ಲಿ ಈ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಟ್ಯಾಂಕರ್ ಪಲ್ಟಿಯಾದ ಬಳಿಕ, ಇಂಧನ ಹೊರ ಚೆಲ್ಲಿದ್ದು ಟ್ಯಾಂಕರ್ ಸ್ಫೋಟವಾಗೊಂಡಿದೆ.