ವಿದೇಶ

ಗಿನ್ನಿಸ್ ದಾಖಲೆ ಸೇರಿದ ಜೀನ್ಸ್ ಪ್ಯಾಂಟ್..!

ಈ ಜೀನ್ಸ್ ಪ್ಯಾಂಟ್ ನ್ನು ತಯಾರಿಸಲು 30 ಜನ ಕುಶಲಕರ್ಮಿಗಳು, 18 ದಿನಗಳ ಕಾಲ ಶ್ರಮಿಸಿದ್ದಾರೆ. ಈ ಜೀನ್ಸ್‌ ಗಳ ಉದ್ದ 76.34 ಮೀಟರ್ ಆಗಿದೆ. ಈ ಪ್ಯಾಂಟ್‌ ಗಳ ಉದ್ದವು ಪಿಸಾ ಗೋಪುರಕ್ಕಿಂತ ಉದ್ದವಾಗಿದೆ. ಪಿಸಾ ಗೋಪುರವು 55 ಮೀಟರ್ ಎತ್ತರವಾಗಿದೆ.

ಚೀನಾದ ಜೀನ್ಸ್ ಉತ್ಪಾದನಾ ಕಂಪನಿಯೊಂದರಲ್ಲಿ ವಿಶ್ವದ ಅತಿ ಉದ್ದದ ಜೀನ್ಸ್ ಪ್ಯಾಂಟ್ ರೆಡಿ ಮಾಡಿದ್ದು, ಹೊಸ ದಾಖಲೆಯನ್ನೇ ನಿರ್ಮಿಸಿದೆ. ಈ ಜೀನ್ಸ್‌ ಪ್ಯಾಂಟ್ ನ್ನ ಚೀನಾದ ಗುವಾಂಗ್‌ ಕ್ಸಿಯ ಜೀನ್ಸ್ ಉತ್ಪಾದನಾ ಕಂಪನಿಯು ತಯಾರಿಸಿದೆ.

Guinness record : ಇದು ವಿಶ್ವದ ಅತಿ ದೊಡ್ಡ ಜೀನ್ಸ್! ಗಿನ್ನಿಸ್ ಪುಸ್ತಕದಲ್ಲಿ ಸ್ಥಾನ

ಈ ಜೀನ್ಸ್ ಪ್ಯಾಂಟ್ ನ್ನು ತಯಾರಿಸಲು 30 ಜನ ಕುಶಲಕರ್ಮಿಗಳು, 18 ದಿನಗಳ ಕಾಲ ಶ್ರಮಿಸಿದ್ದಾರೆ. ಈ ಜೀನ್ಸ್‌ ಗಳ ಉದ್ದ 76.34 ಮೀಟರ್ ಆಗಿದೆ. ಈ ಪ್ಯಾಂಟ್‌ ಗಳ ಉದ್ದವು ಪಿಸಾ ಗೋಪುರಕ್ಕಿಂತ ಉದ್ದವಾಗಿದೆ. ಪಿಸಾ ಗೋಪುರವು 55 ಮೀಟರ್ ಎತ್ತರವಾಗಿದೆ. ಈ ಪ್ಯಾಂಟ್ ಅನ್ನು 28 ಸೆಪ್ಟೆಂಬರ್ 2024 ರಂದು ಪ್ರಾರಂಭಿಸಲಾಯಿತು. ಈ ಜೀನ್ಸ್ ವೆಸ್ಟ್ ನ ಗಾತ್ರ 58.164 ಮೀಟರ್ ಇದೆ.

ಚೀನಾಕ್ಕಿಂತ ಮೊದಲು, ಪ್ಯಾರಿಸ್ ನಲ್ಲಿ ವಿಶ್ವದ ಅತಿ ಉದ್ದದ ಜೀನ್ಸ್ ಅನ್ನು ತಯಾರಿಸಲಾಯಿತು. ಈ ಜೀನ್ಸ್‌ ನ ಉದ್ದ 65.60 ಮೀಟರ್‌ ಗಳಷ್ಟಿತ್ತು. ಆದರೆ ಚೀನಾದಲ್ಲಿ ತಯಾರಾದ ಪ್ಯಾಂಟ್ 11 ಮೀಟರ್ ಉದ್ದವಿರುವುದು ಗಮನಾರ್ಹ. ಈ ಜೀನ್ಸ್‌ ಗಳನ್ನು ತಯಾರಿಸಲು 18 ದಿನಗಳನ್ನು ತೆಗೆದುಕೊಂಡಿತು. ಇದಕ್ಕಾಗಿ 30 ಕಾರ್ಮಿಕರು ಶ್ರಮಿಸಿದ್ದಾರೆ.

ಈ ಜೀನ್ಸ್‌ ಗೆ ಕೇವಲ ಒಂದು ಬಟನ್‌ ಇದ್ದು, ಇದರ ತೂಕ 3.6 ಟನ್‌ ಗಳು. ಮತ್ತು ಪ್ಯಾಂಟ್ ನ ತೂಕ 3600 ಕೆಜಿ. ಈ ಪ್ಯಾಂಟ್‌ ಗೆ 7.8 ಮೀಟರ್ ಉದ್ದದ ಝಿಪ್ಪರ್ ಅನ್ನು ಒದಗಿಸಲಾಗಿದೆ. ಈ ಝಿಪ್ಪರ್ ಅನ್ನು ಸ್ಟೇನ್ಲೆಸ್ ಸ್ಟೀಲ್ ನಿಂದ ತಯಾರಿಸಲಾಗುತ್ತದೆ. ಈ ಝಿಪ್ ಎಂದಿಗೂ ತುಕ್ಕು ಹಿಡಿಯುವುದಿಲ್ಲ. ಸದ್ಯ ಈ ಜೀನ್ಸ್ ಪ್ಯಾಂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ.