ಸ್ಪೆಷಲ್ ಸ್ಟೋರಿ

ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ..ಹೈರಾಣಾದ ವಾಹನ ಸವಾರರು..!

ಮಳೆ ಮಳೆ ಮಳೆ ಇದು ಅಂತಿಂಥಾ ಮಳೆಯಲ್ಲ, ಮಾಯದಂಥಾ ಮಳೆ, ಬೆಂಗಳೂರಿನಲ್ಲಿ ಸತತ ಒಂದು ವಾರದಿಂದ ಬಿಟ್ಟು ಬಿಡದೆ ಬೀಳ್ತಿದೆ..

ಸ್ನೇಹಿತರೇ ಬೆಂಗಳೂರಿನ ಸುತ್ತ ಮುತ್ತ ಹಲವು ದಿನಗಳಿಂದ ಬಿಟ್ಟು ಬಿಡದೆ ಮಳೆ ಬೀಳ್ತಾನೆ ಇದೆ, ಅದೆಷ್ಟರ ಮಟ್ಟಿಗೆ ಅಂದ್ರೆ ಈ ಮಳೆ ಯಾವಾಗ ಬೀಳುತ್ತೆ ಅನ್ನೋ ಅಂದಾಜು ಸಿಗದಷ್ಟರ ಮಟ್ಟಿಗೆ ಮಳೆ ಬೀಳುತ್ತಿದೆ, ಸುಡುವ ಬಿಸಿಲು ನೆತ್ತಿಯ ಮೇಲೆ ಬೀಳುತ್ತಿದೆ ಎನ್ನುವಾಗ್ಲೆ. ಇದ್ದಕ್ಕಿದ್ದಂತೆ ಭಾರಿ ಮಳೆ ಬೀಳ್ತಿದೆ, ಈ ಕಾರಣಕ್ಕೆ ಬೆಂಗಳೂರಿಗರಿಗೆ ಕಿರಿ ಕಿರಿ ಉಂಟು ಮಾಡ್ತಿದೆ, ತಗ್ಗು ಪ್ರದೇಶಗಳಲ್ಲಿ ವಾಸ ಮಾಡುವ ಮಂದಿಗಂತು ಒಂದು ವಾರದಿಂದ ಮಳೆಯದ್ದೇ ಅವಾಂತರ, ಒಮ್ಮೆ ಮಳೆ ರಾತ್ರಿ ವೇಳೆ ಧಾರಾಕಾರವಾಗಿ ಸುರಿದ್ರೆ, ಮತ್ತೊಮ್ಮೆ ಮಧ್ಯಾಹ್ನವೇ ಮಳೆಯ ಆರ್ಭಟ ಕಾಡ್ತಿದೆ, ಒಟ್ನಲ್ಲಿ ಬೆಂಗಳೂರಿನ ಮಂದಿ ಈ ಮಳೆ ಕಾಟ ಯಾವಾಗ ನಿಲ್ಲತ್ತೋ ಅಂತೇಳಿ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ..