ಸ್ಪೆಷಲ್ ಸ್ಟೋರಿ

ಈ ಟಿಪ್ಸ್​ ಫಾಲೋ ಮಾಡಿದರೆ ಮಳೆಗಾಲದಲ್ಲಿ ನಿಮ್ಮ ಸ್ಕೂಟರ್​-ಬೈಕ್​ಗಳನ್ನ ರಕ್ಷಣೆ ಮಾಡಿಕೊಳ್ಳಬಹುದು..!

ಮಳೆಗಾಲದ ಮೊದಲು ಮತ್ತು ನಂತರ ಸರ್ವಿಸಿಂಗ್ ಮಾಡಿಸುವುದು ಮುಖ್ಯ.

ಮಳೆಗಾಲದಲ್ಲಿ ಪೆಟ್ರೋಲ್, ಎಲೆಕ್ಟ್ರಿಕ್ ಬೈಕ್, ಸ್ಕೂಟರ್‌ಗಳನ್ನ ಹೇಗೆ ಕಾಪಾಡ್ಕೊಳ್ಳೋದು ಅಂತ ಇಲ್ಲಿ ತಿಳ್ಕೊಳೋಣ. ಕಂಪನಿಗಳು ಎಲ್ಲಾ ಹವಾಮಾನಕ್ಕೆ ತಕ್ಕಂತೆ ವಾಹನಗಳನ್ನ ತಯಾರಿಸುತ್ತವೆ. ಕಲರ್, ಇಂಜಿನ್, ಬ್ಯಾಟರಿ, ಪೆಟ್ರೋಲ್ ಟ್ಯಾಂಕ್, ಚೈನ್‌ಗೆ ರಕ್ಷಣೆ ಇರುತ್ತೆ. ಆದರೂ ಕೂಡ ಮಳೆನೀರು ಒಳಗೆ ಹೋಗಿ ಪಾರ್ಟ್ಸ್ ಹಾಳಾಗುವ ಸಾಧ್ಯತೆ ಇರುತ್ತೆ. ಈ ಟಿಪ್ಸ್ ಪಾಲಿಸಿದ್ರೆ ನಿಮ್ಮ ಬೈಕ್, ಸ್ಕೂಟರ್‌ ಒಳಗೆ ನೀರು ಹೋಗುವುದನ್ನ ನೀವು ತಪ್ಪಿಸಬಹುದು.

ಮಳೆಗಾಲದ ಸಂದರ್ಭದಲ್ಲಿ ವಾಹನಗಳಿಗೆ ಒಳ್ಳೆಯ ವಾಟರ್‌ಪ್ರೂಫ್ ಕವರ್‌ಗಳನ್ನು ಖರೀದಿಸಿ. ಇವು ಬ್ಯಾಟರಿ, ಮೋಟಾರ್‌ಗಳಿಗೆ ನೀರು ಹೋಗದಂತೆ ತಡೆಯುತ್ತವೆ. ಮಳೆಗಾಲದಲ್ಲಿ ಬಹಳಷ್ಟು ಜನ ವಾಹನವನ್ನ ಸ್ವಚ್ವ ಮಾಡುವುದಿಲ್ಲ. ಯಾಕೆಂದರೆ ಮಳೆಯಲ್ಲಿ ಮತ್ತೆ ಮಣ್ಣಾಗುತ್ತೆ ಅಂತ. ಇದು ತಪ್ಪು. ಮಣ್ಣಾದ ತಕ್ಷಣ ಸ್ವಚ್ಛ ಮಾಡಿ ಸುರಕ್ಷಿತ ಜಾಗದಲ್ಲಿಡುವುದು ಮುಖ್ಯ. ಹೀಗೆ ಮಾಡಿದ್ರೆ ಮಣ್ಣು, ಧೂಳು ಮುಖ್ಯ ಭಾಗಗಳಲ್ಲಿ ಸೇರಲ್ಲ. ತುಕ್ಕು ಹಿಡಿಯದಂತೆ ತಕ್ಷಣ ಸ್ವಚ್ಛ ಮಾಡಿ ಒರೆಸಿಡಬೇಕು. 

ಎಲೆಕ್ಟ್ರಿಕಲ್ ಕನೆಕ್ಷನ್‌ಗಳು, ಬ್ರೇಕ್‌ಗಳು, ಸಸ್ಪೆನ್ಷನ್ ಭಾಗಗಳ ಬಗ್ಗೆ ಗಮನ ಕೊಡಿ. ಮಳೆನೀರು ನಿಂತರೆ ತುಕ್ಕು ಹಿಡಿಯುತ್ತದೆ. ಹೀಗಾಗದಿರಲು ವಾಹನ ತೊಳೆಯುವುದು ಬಹಳ ಮುಖ್ಯ. ಸಿಲಿಕಾನ್ ಸ್ಪ್ರೇಗಳನ್ನ ಬಳಸುವುದು ಒಳ್ಳೆಯದು. ತೇವಾಂಶ ತಡೆಯುತ್ತವೆ, ಪೇಂಟ್ ಮೇಲೆ ಹೆಚ್ಚಿನ ರಕ್ಷಣೆ ಕೊಡುತ್ತವೆ. ನೀರು ಒಳಗೆ ಹೋಗದಂತೆ ತಡೆಯುತ್ತವೆ. ಬ್ಯಾಟರಿ ಬಾಳಿಕೆ ಹೆಚ್ಚಿಸುತ್ತವೆ. ಎಲೆಕ್ಟ್ರಿಕ್ ಬೈಕ್, ಸ್ಕೂಟರ್‌ಗಳಲ್ಲಿ ಡಿಜಿಟಲ್ ಇಂಡಿಕೇಶನ್ಸ್ ಇರುತ್ತವೆ. ಅವು ನೀರು ಒಳಗೆ ಹೋಗಿದೆಯಾ ಅಂತ ತೋರಿಸುತ್ತವೆ. ಅವುಗಳನ್ನು ಪದೇ ಪದೇ ಪರಿಶೀಲಿಸಿ. 

ಎಲೆಕ್ಟ್ರಿಕ್ ವಾಹನಗಳಲ್ಲಿ ಎಲೆಕ್ಟ್ರಿಕಲ್ ಕನೆಕ್ಷನ್‌ಗಳು ತೇವದಿಂದ ಹಾಳಾಗಿವೆಯೇ ಅಂತ ನೋಡ್ಕೊಳ್ಳಿ. ಇದು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು. ಬ್ಯಾಟರಿ ಟರ್ಮಿನಲ್ಸ್, ಚಾರ್ಜರ್ ಪೋರ್ಟ್, ವೈರಿಂಗ್ ಎಲ್ಲವನ್ನೂ ಪರಿಶೀಲಿಸಿ. ಅಗತ್ಯವಿದ್ದರೆ ವಾಟರ್ ಪ್ರೊಟೆಕ್ಷನ್ ಮಾಡಿಸಿ. ಇನ್ಸುಲೇಟಿಂಗ್ ಗ್ರೀಸ್, ತೇವಾಂಶ ನಿರೋಧಕಗಳನ್ನು ಬಳಸಿ. ಎಲೆಕ್ಟ್ರಿಕ್ ವಾಹನವನ್ನು ಸುರಕ್ಷಿತ ಸ್ಥಳದಲ್ಲಿಡಿ. ರೆಗ್ಯುಲರ್ ಸರ್ವಿಸಿಂಗ್ ಮಾಡಿಸಿ. ಮಳೆಗಾಲದ ಮೊದಲು ಮತ್ತು ನಂತರ ಸರ್ವಿಸಿಂಗ್ ಮಾಡಿಸುವುದು ಮುಖ್ಯ. ಮಳೆಗಾಲದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ರಕ್ಷಿಸಲು ಜಾಗ್ರತೆ ವಹಿಸುವುದು ಮುಖ್ಯ. ಸ್ವಲ್ಪ ಗಮನ ಕೊಟ್ಟರೆ ನಿಮ್ಮ ವಾಹನದ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಬಹುದು.