ಸ್ಪೆಷಲ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಹನುಮಂತನಿಗೂ ಶುರುವಾಯ್ತು ಪೀಕಲಾಟ..!

ಬಿಗ್ ಬಾಸ್ 11ರ ಸೀಸನ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದಿದೆ, ಒಂದೇ ವಾರದಲ್ಲಿ ಡಬಲ್ ನಾಮಿನೇಷನ್ ನಡೆದು ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರಗೆ ನಡೆದಿರೋದು ತೀವ್ರ ಕುತೂಹಲ ಮೂಡಿಸಿದೆ, ಇದರ ನಡುವೆ ಗಾಯಕ ಹನುಮಂತ ಬಿಗ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಪ್ರವೇಶ ಪಡೆದಿದ್ದಾರೆ..

ಸ್ನೇಹಿತರೇ ಹನುಮಂತ ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಯಲ್ಲಿ ಮಿಂಚಿದ್ದ ಗಾಯಕ, ತಮ್ಮ ಹಾಡುಗಳ ಮೂಲಕ ಮನೆ ಮಾತಾಗಿದ್ದ ಹನುಮಂತ ಈ ಬಾರಿ ಬಿಗ್ ಬಾಸ್ 11ರ ವೇದಿಕೆಗೆ ಕಾಲಿಟ್ಟಿದ್ದಾರೆ, ಆದ್ರೆ ಯಾಕೋ ಕಾಲಿಟ್ಟ ಒಂದೇ ದನಕ್ಕೆ ಹನುಮಂತನಿಗೆ ಪೀಕಲಾಟ ಶುರುವಾಗಿದೆ, ಅದೃಷ್ಟ ಎಂಬಂತೆ ಬಂದ ದಿನವೇ ಹನುಮಂತನಿಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿತ್ತಾದ್ರೂ, ಹನುಮಂತನಿಗೆ ಯಾಕೋ ಏನಂದ್ರೆ ಏನೂ ಸರಿಹೋಗುತ್ತಿಲ್ಲ ಅದಕ್ಕೆ ಕಾರಣ ಹನುಮಂತನಿಗೆ ಬಿಗ್ ಬಾಸ್ ಕೊಟ್ಟ ಹೊಸ ಟಾಸ್ಕ್, ಮೊದಲ ದಿನವೇ ಹನುಮಂತನಿಗೆ 1 ರಿಂದ 14 ಸ್ಥಾನಗಳಲ್ಲಿ ಯಾರ್ಯಾರು ಯಾವ್ಯಾವ್ಯಾ ಸ್ಥಾನದಲ್ಲಿ ನಿಂತರೆ ಸೂಕ್ತ ಎಂದು ಸೂಚಿಸಿ ಅಂತಾ ಹೇಳಿದ್ರು, ಇದಕ್ಕೆ ಮೊದಲು ನನ್ನ ಕೈಲಿ ಆಗೋದಿಲ್ಲ ಎಂದಿದ್ದ ಹನುಮಂತ ತದನಂತರ ಅನಿವಾರ್ಯವಾಗಿ ಟಾಸ್ಕ್ನಲ್ಲಿ ಭಾಗವಹಿಸಬೇಕಾಯ್ತು, ಆದ್ರೆ ಪ್ರತಿಸ್ಪರ್ಧಿಗಳಿಂದ ಶುರುವಾಯ್ತು ನೋಡಿ ತಮ್ಮ ಸ್ಥಾನಗಳ ಕಿತ್ತಾಟ, ಇದರಿಂದ ಹನುಮಂತ ಒಂದು ಕ್ಷಣ ಅವಕ್ಕಾಗಿ ಹೋಗಿದ್ದಾರೆ..ಬಿಗ್ ಬಾಸ್ ಬಳಿ ಹೋಗಿ ಈ ರೀತಿ ಜಗಳ ಆಡ್ತಾರೆ ಅಂದಿದ್ರೆ ನಾನು ಬಿಗ್ ಬಾಸ್ ಮನೆಗೆ ಬರ್ತಿರಲಿಲ್ಲ ಅಂತಾ ಹೇಳಿಕೆ ಕೊಟ್ಟಿದ್ದಾರೆ..