ಕರ್ನಾಟಕ

ಗ್ರಾಹಕರಿಗೆ ಬಿಗ್​ ಶಾಕ್..! ಬೆಳ್ಳುಳ್ಳಿ ,ಈರುಳ್ಳಿ ಬೆಲೆ ಕೇಳಿದರೆ ಕಣ್ಣಲ್ಲಿ ನೀರು ಬರತ್ತೆ.

ಯಶವಂತಪುರ ಹಾಗೂ ದಾಸನಪುರ ಎಪಿಎಂಸಿಗೆ ಬುಧವಾರ 127 ಲಾರಿಗಳಲ್ಲಿ 38,415 ಚೀಲ ಈರುಳ್ಳಿ ಬಂದಿವೆ. ಈ 127 ಲಾರಿಗಳಲ್ಲಿ ಹತ್ತಿಪ್ಪತ್ತು ಲಾರಿಗಳು ಮಾತ್ರ ಕರ್ನಾಟಕದ್ದು ಉಳಿದವೆಲ್ಲ ಪೂನಾದಿಂದ ಬಂದಿವೆ.

 ಬೆಂಗಳೂರು (.29): ಮಳೆ ಹೆಚ್ಚಾದ ಪರಿಣಾಮ ಈರುಳ್ಳಿ ಬೆಳೆ ಹಾನಿಯಾಗಿರುವುದರಿಂದ ಬೆಲೆ ಹೆಚ್ಚಾಗಿದೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಕೇಜಿಗೆ 60 ರೂಪಾಯಿ ಏರಿಕೆಯಾಗಿದೆ. ಹಾಗೆಯೆ ರಾಜ್ಯದಲ್ಲಿ ಬೆಳೆ ಕೊರತೆ ಕಾರಣದಿಂದ ಮಹಾರಾಷ್ಟ್ರದಿಂದಲೇ ಹೆಚ್ಚಿನ ಪ್ರಮಾಣದ ಈರುಳ್ಳಿ ಬರುತ್ತಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆ ಬರಲು ಇನ್ನೂ ಒಂದು ತಿಂಗಳು ಬೇಕು. ನಡುವೆ ಪುನಃ ಮಳೆ ಹೆಚ್ಚಾದರೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಾಗುತ್ತದೆ. ಅಕಸ್ಮಾತ್ ಹೀಗಾದರೆ ಬೆಲೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಈರುಳ್ಳಿ ವರ್ತಕರ ಸಂಘ ತಿಳಿಸಿದೆಇನ್ನು ಮಳೆ ಕಾರಣಕ್ಕೆ ಬೆಳ್ಳುಳ್ಳಿ ದರವೂ ಪುನಃ ಗಗನಕ್ಕೇರಿದೆ. ಬೆಳ್ಳುಳ್ಳಿ ಬೆಲೆ ಕೇಜಿಗೆ –400ಕ್ಕೆ ಏರಿಕೆ ಆಗಿದೆ.