ಕ್ರೀಡೆಗಳು

IND VS BAN: ಟೆಸ್ಟ್​​​ನಲ್ಲಿ ಟಿ20 ಆಟವಾಡ್ತಿರೋ ಟೀಂ ಇಂಡಿಯಾ..ಕಾರಣವೇನು ಗೊತ್ತಾ..?

ಎರಡು ಟೆಸ್ಟ್​​​ಗಳ ಕ್ರಿಕೆಟ್​ ಸರಣಿಯಲ್ಲಿ ಈಗಾಗ್ಲೆ ಮೊದಲ ಟೆಸ್ಟ್​​​ನಲ್ಲಿ ಬಾಂಗ್ಲಾದೇಶದ ವಿರುದ್ಧ ಇಂಡಿಯಾ ಭರ್ಜರಿ ಜಯಭೇರಿ ಬಾರಿಸಿದೆ, ಎರಡನೇ ಟೆಸ್ಟ್​​ನಲ್ಲಿ ಮಳೆಯ ಕಾರಣ ಮೂರು ದಿನ ಪಂದ್ಯ ನಡೆದಿರಲಿಲ್ಲ..

ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಮಾಡ್ತಿದೆ, ಕೇವಲ 11 ಓವರ್ ಗೆ 111ರನ್ ಗಳಿಸಿ ಟೆಸ್ಟ್ ಪಂದ್ಯದಲ್ಲಿ, ಟಿ20 ಆಟಆಡುತ್ತಿದೆ, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 233ರನ್ಗೆ ಆಲ್ ಔಟ್ ಆಗಿದೆ, ಈಗಾಗ್ಲೆ ಮಳೆಯ ಕಾರಣ ಮೂರು ದಿನಗಳು ಪಂದ್ಯ ರದ್ದಾಗಿತ್ತು, ಇನ್ನು ಉಳಿದಿರೋದು ಕೇವಲ ಒಂದುವರೆ ದಿನಗಳು ಮಾತ್ರ ಆದ ಕಾರಣ ಟೀಂ ಇಂಡಿಯಾ ಆದಷ್ಟು ಬೇಗ ಬಾಂಗ್ಲಾದೇಶ ಕೊಟ್ಟ ಟಾರ್ಗೆಟ್ನ ರೀಚ್ ಮಾಡಿ, ಬಾಂಗ್ಲಾದೇಶಕ್ಕೆ ಮತ್ತೆ ಬ್ಯಾಟಿಂಗ್ಗೆ ಇಳಿಸಿ ಆದಷ್ಟು ಬೇಗ ಅವರನ್ನ ಆಲ್ಔಟ್ ಮಾಡುವ ಗುರಿ ಇದಾಗಿರೋದ್ರಿಂದ, ಹೋಡಿ ಬಡಿ ಆಟಕ್ಕೆ ಮುಂದಾಗಿದೆ ಟೀಂ ಇಂಡಿಯಾ.. ನೋಡೋಣ ಎರಡನೇ ಟೆಸ್ಟ್ ಯಾರ ಪಾಲಾಗಲಿದೆ ಅಂತಾ