ದೇಶ

ನಿಲ್ಲದ ಇಸ್ರೇಲ್ ಅಟ್ಟಹಾಸ.. ಪ್ಯಾಲೆಸ್ತೀನ್​​ ಗೆ ಸಹಾಯ ಹಸ್ತ ಚಾಚಿದ ಭಾರತ..!

ಇಸ್ರೇಲ್ ಅಟ್ಟಹಾಸದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ಯಾಲೆಸ್ತೀನ್​ ಗೆ, ಭಾರತ ನೆರವು ಹಸ್ತ ಚಾಚಿದೆ. ಅಂದ್ರೆ ಪ್ಯಾಲೆಸ್ತೀನ್​​​ ಜನರಿಗಾಗಿ ಭಾರತ 30 ಟನ್ ಔಷಧ ಹಾಗೂ ಆಹಾರ ಪದಾರ್ಥಗಳನ್ನು ರವಾನಿಸಿದೆ.

ಇಸ್ರೇಲ್ ಹಾಗೂ ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷ ತಾರಕಕ್ಕೇರಿದೆ. ಇಸ್ರೇಲ್ ವೈಮಾನಿಕ ದಾಳಿಯಿಂದ ಪ್ಯಾಲೆಸ್ತೀನ್ ನಲುಗಿ ಹೋಗಿದೆ. ಇಸ್ರೇಲ್ ಅಟ್ಟಹಾಸದಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ಯಾಲೆಸ್ತೀನ್ ಗೆ, ಭಾರತ ನೆರವು ಹಸ್ತ ಚಾಚಿದೆ. ಅಂದ್ರೆ ಪ್ಯಾಲೆಸ್ತೀನ್ ಜನರಿಗಾಗಿ  ಭಾರತ 30 ಟನ್ ಔಷಧ ಹಾಗೂ ಆಹಾರ ಪದಾರ್ಥಗಳನ್ನು ರವಾನಿಸಿದೆ. 

ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು, ಯುನೈಟೆಡ್ ರಿಲೀಫ್ ಅಂಡ್ ವರ್ಕ್ಸ್ ಏನೆಜ್ಸಿಯ ಮೂಲಕ ಪ್ಯಾಲೆಸ್ತೀನ್ ಗೆ ನರವು ನೀಡಲಾಗಿದೆ ಎಂದು ತಿಳಿಸಿದೆ. ಅಗತ್ಯ ಔಷಧಿಗಳು, ಶಸ್ತ್ರಚಿಕಿತ್ಸಾ ಸರಬರಾಜುಗಳು ಮತ್ತು ಬಿಸ್ಕೆಟ್ಟುಗಳನ್ನು ಕಳುಹಿಸಲಾಗಿದೆ.