ಕ್ರೀಡೆಗಳು

ನ್ಯೂಜಿಲೆಂಡ್‌ ವಿರುದ್ಧ ಭಾರತಕ್ಕೆ ಸೋಲು : 36 ವರ್ಷಗಳ ನಂತರ ಭಾರತದ ನೆಲದಲ್ಲಿ ಟೆಸ್ಟ್‌ ಗೆದ್ದು ಬೀಗಿದ ಕಿವೀಸ್‌

ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 402 ರನ್​ ಗಳಿಗೆ ಆಲೌಟ್ ಆಗಿತ್ತು. ಇದರಲ್ಲಿ ಟೀಮ್ ಸೌತಿ 65, ಡಿವೋನ್ ಕಾನ್ವೆ 91, ರಚಿನ್ ರವೀಂದ್ರ 134 ರನ್ ​ಗಳನ್ನ ಗಳಿಸಿ ತಂಡಕ್ಕೆ ಕೊಡುಗೆ ನೀಡಿದ್ದರು. ಇದರಿಂದ 356ರನ್​ ಗಳ ಲೀಡ್ ಪಡೆದುಕೊಂಡಿತ್ತು. ಬಳಿಕ 2ನೆ ಇನ್ನಿಂಗ್ಸ್ ​ನಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಮ್ ಬೃಹತ್ ಮೊತ್ತ ಕಲೆ ಹಾಕಿತ್ತು. ರೋಹಿತ್ 50, ಕೊಹ್ಲಿ 70, ರಿಷಬ್ ಪಂತ್ 99 ಹಾಗೂ ಸರ್ಫರಾಜ್ ಅವರ 150 ರನ್ಗ ಳ ನೆರವಿನಿಂದ ಭಾರತ ಒಟ್ಟು 462 ರನ್​ ಗಳನ್ನು ಕಲೆ ಹಾಕಿತ್ತು.

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೂರು ಟೆಸ್ಟ್‌ ಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್‌ ಪಡೆ 8 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಭಾರತ ನೀಡಿದ್ದ 107 ರನ್‌ ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ ಸುಲಭ ಜಯಗಳಿಸಿತು. ಬರೋಬ್ಬರಿ 36 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡ ಟೆಸ್ಟ್ ಪಂದ್ಯ ಗೆದ್ದು ಬೀಗಿದೆ.

IND vs NZ 1st Test: ತವರು ನೆಲದಲ್ಲೇ ಟೀಂ ಇಂಡಿಯಾಗೆ ಸೋಲುಣಿಸಿದ ನ್ಯೂಜಿಲೆಂಡ್‌

ನ್ಯೂಜಿಲೆಂಡ್‌ 1988 ರ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಪಂದ್ಯವೊಂದರಲ್ಲಿ ಮೊದಲ ಜಯವನ್ನು ದಾಖಲಿಸಿತು. ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡನೇ ಇನ್ನಿಂಗ್ಸ್‌ ನಲ್ಲೂ ರಚಿನ್‌ ರವೀಂದ್ರ ಹಾಗೂ ವಿಲ್‌ ಯಂಗ್‌ ಉತ್ತಮ ಪ್ರದರ್ಶನ ತೋರಿ ಭಾರತಕ್ಕೆ ಸೋಲಿನ ರುಚಿ ತೋರಿದರು.

ಮೊದಲ ಇನ್ನಿಂಗ್ಸ್ ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 402 ರನ್ ಗಳಿಗೆ ಆಲೌಟ್ ಆಗಿತ್ತು. ಇದರಲ್ಲಿ ಟೀಮ್ ಸೌತಿ 65, ಡಿವೋನ್ ಕಾನ್ವೆ 91, ರಚಿನ್ ರವೀಂದ್ರ 134 ರನ್ ಗಳನ್ನ ಗಳಿಸಿ ತಂಡಕ್ಕೆ ಕೊಡುಗೆ ನೀಡಿದ್ದರು. ಇದರಿಂದ 356ರನ್ ಗಳ ಲೀಡ್ ಪಡೆದುಕೊಂಡಿತ್ತು. ಬಳಿಕ 2ನೆ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಮ್ ಬೃಹತ್ ಮೊತ್ತ ಕಲೆ ಹಾಕಿತ್ತು. ರೋಹಿತ್ 50, ಕೊಹ್ಲಿ 70, ರಿಷಬ್ ಪಂತ್ 99 ಹಾಗೂ ಸರ್ಫರಾಜ್ ಅವರ 150 ರನ್ಗ ಳ ನೆರವಿನಿಂದ ಭಾರತ ಒಟ್ಟು 462 ರನ್ ಗಳನ್ನು ಕಲೆ ಹಾಕಿತ್ತು.

ಭಾನುವಾರ ಕೊನೆಯ ದಿನದಾಟದಲ್ಲಿ ಗೆಲುವಿಗೆ 107 ರನ್ ಗಳಿಸಿದ್ದ ಕಿವೀಸ್‌ ಗೆ ಆರಂಭದಲ್ಲೇ ಟೀಂ ಇಂಡಿಯಾ ಆಘಾತ ನೀಡಿತ್ತು. ಬೌಲರ್‌ ಗಳಿಗೆ ಪೂರಕವಾಗಿದ್ದ ವಾತಾವರಣದಲ್ಲಿ ಮೊದಲನೇ ಓವರ್ ನಲ್ಲೇ ವಿಕೆಟ್‌ ಪಡೆಯುವ ಮೂಲಕ ಜಸ್ಪ್ರೀತ್‌ ಬುಮ್ರಾ ಸಂತಸದ ಅಲೆ ಸೃಷ್ಟಿಸಿದ್ದರು. ಬಳಿಕ ವಿಕೆಟ್‌ ಬಿಟ್ಟುಕೊಡದ ರಚಿನ್‌ ಹಾಗೂ ವಿಲ್‌ ಯಂಗ್‌ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಈ ಸುಲಭ ಟಾರ್ಗೆಟ್ ಬೆನ್ನು ಹತ್ತಿದ್ದ ನ್ಯೂಜಿಲೆಂಡ್ ಟೀಮ್ 2ನೇ ಇನ್ನಿಂಗ್ಸ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 107 ರನ್ ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿ ಗೆಲುವು ದಾಖಲಿಸಿದೆ. ಮೊದಲ ಟೆಸ್ಟ್ ನ ಕೊನೆ ದಿನದಲ್ಲಿ 8 ವಿಕೆಟ್ ಗಳಿಂದ ನ್ಯೂಜಿಲೆಂಡ್ ಗೆದ್ದು ಬೀಗಿದೆ. ರಚಿನ್ ರವೀಂದ್ರ ಅವರಿಗೆ ಪ್ಲೇಯರ್ ಆಫ್ ದೀ ಮ್ಯಾಚ್ ಪ್ರಶಸ್ತಿ ನೀಡಲಾಗಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಪಡೆದಿದೆ.