ದೇಶ

CRICKET: ಭಾರತ V/S ಬಾಂಗ್ಲಾದೇಶ: ಎರಡನೇ ಇನ್ನಿಂಗ್ಸ್​​​ನಲ್ಲಿ ಬಾಂಗ್ಲಾದೇಶ 146ಕ್ಕೆ ಆಲ್ ​ಔಟ್​​

ಭಾರತ ಮತ್ತು ಬಾಂಗ್ಲಾದೇಶ ಎರಡನೇ ಟೆಸ್ಟ್​​ ಮ್ಯಾಚ್​​ನಲ್ಲಿ ಭಾರತಕ್ಕೆ ಎರಡನೇ ಇನ್ನಿಂಗ್ಸ್​​​​ ನಲ್ಲಿ ಗೆಲುವಿಗೆ ಬೇಕಾಗಿರೋದು ಕೇವಲ 95 ರನ್​ ಮಾತ್ರ

ಮೊದಲ ಟೆಸ್ಟ್ ನಲ್ಲಿ ಗೆಲುವು ಕಂಡಿದ್ದ ಭಾರತಕ್ಕೆ ಎರಡನೇ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಹುಮ್ಮಸ್ಸಿನಲ್ಲಿತ್ತು, ಆದ್ರೆ ಎರಡು ದಿನ ಮಳೆಯ ಕಾಟದಿಂದ ಕ್ರಿಕೆಟ್ ಪಂದ್ಯ ಕುಂಟಿತ ಕಂಡಿತ್ತು, ಆದ್ರೆ ಭಾರತ ಈ ಟೆಸ್ಟ್ ಪಂದ್ಯವನ್ನೂ ಗೆಲ್ಲಲೇಬೇಕು ಅನ್ನೋ ಲೆಕ್ಕಾಚಾರದಲ್ಲಿ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಟಿ20 ಪಂದ್ಯದಂತೆ ಆಡಿ 52ರನ್ ಮುನ್ನಡೆ ಸಾಧಿಸಿ ಡಿಕ್ಲೇರ್ ಮಾಡಿಕೊಂಡಿತ್ತು, ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ಕೇವಲ 146ರನ್ ಗೆ ಆಲ್ಔಟ್ ಆಗಿದೆ..

ಕೇವಲ 95ರನ್ ಗಳ ಮುನ್ನಡೆ ಸಾಧಿಸಿರೋ ಬಾಂಗ್ಲಾದೇಶ ತನ್ನ ಎಲ್ಲ ವಿಕೆಟ್ಗಳನ್ನ 146ಕ್ಕೆ ಕಳೆದುಕೊಂಡು, ಕೇವಲ 95ರನ್ ಗಳ ಟಾರ್ಗೆಟ್ ಭಾರತಕ್ಕೆ ಕೊಟ್ಟಿದೆ..