ದೇಶ

ಭಾರತ ವಿರೋಧಿ ಅಲೆ ಸೃಷ್ಟಿಸುತ್ತಿದೆಯಾ ಕೆನಡಾ? ಸಿಖ್ಖರಿಗೆ ಭಾರತದ ವಿರದ್ಧ ಮಾತನಾಡುವಂತೆ ಕೆನಡಾ ಪೊಲೀಸ್​ ಒತ್ತಡ..?

ಶಾಂತಿ ಸ್ಥಾಪನೆಗೆ ರಷ್ಯಾ-ಉಕ್ರೆನ್​ ದೇಶಗಳು ಭಾರತದ ಕಡೆ ತಿರುಗಿ ನೋಡುತ್ತಿದ್ದರೆ, ಇತ್ತ ಕೆನಡಾ ಭಾರತದ ವಿರುದ್ಧ ಈ ರೀತಿ ಆರೋಪ ಮಾಡುತ್ತಿದೆ.

ಒಟ್ಟಾವಾ: ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಬಳಿಕ ಭಾರತ ವಿರುದ್ಧ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನಿರಂತರ ಆರೋಪಗಳನ್ನು ಮಾಡಿದ್ದರು. ಈಗ ಭಾರತದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವಂತೆ ತನ್ನ ದೇಶದಲ್ಲಿನ ಸಿಖ್ ಸಮುದಾಯಕ್ಕೆ ಕೆನಡಾ ಪೊಲೀಸರು ಕರೆ ನೀಡಿದ್ದಾರೆ. ತನ್ಮೂಲಕ ಭಾರತದ ವಿರುದ್ಧ ಬಹಿರಂಗವಾಗಿ ಕುಮ್ಮಕ್ಕು ನೀಡಲಾರಂಭಿಸಿದ್ದಾರೆ. ಇದು ಈಗಾಗಲೇ ಎರಡು ದೇಶಗಳ ನಡುವೆ ಹಳಸಿರುವ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆ ಇದ

ಕೆನಡಾದ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಮೈಕ್ಡುಹೆಮೆ, ಭಾರತ ಸರ್ಕಾರದ ಏಜೆಂಟ್‌ಗಳು ಕೆನಡಾದಲ್ಲಿ ವ್ಯಾಪಕ ಹಿಂಸಾ ಕೃತ್ಯಗಳಲ್ಲಿ ತೊಡಗಿದ್ದಾರೆ. ಹೀಗಾಗಿ ಈ ಸಂಬಂಧ ನಡೆಯುತ್ತಿರುವ ತನಿಖೆ ಬಗ್ಗೆ ಅರಿವು ಹೊಂದಿರುವ ಸಿಖ್ ಸಮುದಾಯದ ಜನರು ಬಹಿರಂಗವಾಗಿ ಹೇಳಿಕೆ ನೀಡಬೇಕು ಎಂದು ಅವರು ಕೋರಿದ್ದಾರೆ. ಭಾರತೀಯ ರಾಜತಾಂತ್ರಿಕ ಹಾಗೂ ದೂತಾವಾಸ ಅಧಿಕಾರಿಗಳು ಕೊಲೆ, ಸುಲಿಗೆ, 'ಭಾರತ ಸರ್ಕಾರದ ಏಜೆಂಟರು, ಕೆನಡಾದಲ್ಲಿನ ದಕ್ಷಿಣ ಏಷ್ಯರನ್ನು ಅದರಲ್ಲೂ ವಿಶೇಷವಾಗಿ ಖಲಿಸ್ತಾನಿ ಬೆಂಬಲಿಗರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ' ಎಂದು ದೂರಿದ್ದರು. 

ಭಾರತ ಸರ್ಕಾರ ಈ ಎಲ್ಲಾ ಆರೋಪಗಳನ್ನು ಸಾರಸಗಟಾಗಿ ತಿರಸ್ಕರಿಸಿದೆ. ಶಾಂತಿ ಸ್ಥಾಪನೆಗೆ ರಷ್ಯಾ-ಉಕ್ರೆನ್ ದೇಶಗಳು ಭಾರತದ ಕಡೆ ತಿರುಗಿ ನೋಡುತ್ತಿದ್ದರೆ, ಇತ್ತ ಕೆನಡಾ ಭಾರತದ ವಿರುದ್ಧ ಮಾಡುತ್ತಿರುವ ಆರೋಪ ಸತ್ಯಕ್ಕೆ ವಿರುದ್ಧವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.