ವಿದೇಶ

ಗಾಜಾಪಟ್ಟಿ ಮೇಲೆ ಮುಂದುವರಿದ ಇಸ್ರೇಲ್ ದಾಳಿ..73 ಮಂದಿ ಪ್ಯಾಲೆಸ್ತೇನಿಯರು ಸಾವು

ಗಾಜಾಪಟ್ಟಿ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆದಿದ್ದು, ಇದರಿಂದ 73 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ.

ಗಾಜಾಪಟ್ಟಿ ಮೇಲೆ ಇಸ್ರೇಲ್ ಮತ್ತೆ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲ್ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದೆ. ನಿನ್ನೆ ಬೀಟ್ ಲಾಹಿಯಾ ಪಟ್ಟಣದ ಮೇಲೆ ಇಸ್ರೇಲ್ ದಾಳಿಯಾಗಿದ್ದು, ಈ ವೇಳೆ ಮಹಿಳೆಯರು, ಮಕ್ಕಳು ಸೇರಿ 73 ಮಂದಿ ಅಸು ನೀಗಿದ್ದಾರೆ. ಬಹುಮಹಡಿ ಕಟ್ಟಡವೊಂದನ್ನು ಗುರಿಯಾಗಿಸಿಕೊಂಡು ಇಸ್ರೇಲ್ ವೈಮಾನಿಕ ದಾಳಿ  ನಡೆದಿದ್ದು, ಹಲವು ಮನೆಗಳಿಗೂ ತೀವ್ರ ತೊಂದರೆಯಾಗಿದೆ ಎಂದು ವರದಿಯಾಗಿದೆ.