ವಿದೇಶ

ನಿಲ್ತಿಲ್ಲ ಲೆಬನಾನ್​ ಮೇಲೆ ಇಸ್ರೇಲ್​ ದಾಳಿ - ಮೃತರ ಸಂಖ್ಯೆ 16ಕ್ಕೆ ಏರಿಕೆ..

ಬೈರುತ್: ದಕ್ಷಿಣ ಲೆಬನಾನ್‌ನ ಪುರಸಭೆ ಕಚೇರಿಯ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಮೃತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

ಸ್ನೇಹಿತರೇ  ದಕ್ಷಿಣ ಲೆಬನಾನ್‌ನ ನಬಾತಿಹ್ ಪುರಸಭೆ ಕಚೇರಿಯ ಮೇಲೆ ಇಸ್ರೇಲ್ ದಾಳಿ ನಡೆಸಿದ ದಾಳಿಗೆ 16 ಮಂದಿ ಬಲಿಯಾಗಿದ್ದು, 52 ಜನರು ಗಾಯಗೊಂಡಿದ್ದಾರೆ.

ಲೆಬನಾನ್ ಆರೋಗ್ಯ ಸಚಿವಾಲಯವು ನೀಡಿದ ವರದಿಯಲ್ಲಿ, ನಬಾತಿಹ್ ಪುರಸಭೆ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪುರಸಭೆಯ ಮೇಯರ್ ಕೂಡ ಮೃತಪಟ್ಟಿದ್ದಾರೆ. ಪುರಸಭೆಯ ಪ್ರಧಾನ ಕಚೇರಿ ಧ್ವಂಸಗೊಂಡಿದೆ.

ಇದಕ್ಕೂ ಮುನ್ನ ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದಾಗ 6 ಜನರನ್ನು ಬಲಿ ತೆಗೆದುಕೊಂಡಿದ್ದು, 43 ಜನರು ಗಾಯಗೊಂಡಿದ್ದರು. ನಬಾತಿಹ್ ರಾಜಧಾನಿ ಬೈರುತ್‌ನ ದಕ್ಷಿಣ ಉಪನಗರಗಳಲ್ಲಿ ಹಿಜ್ಬುಲ್ಲಾದ ಪ್ರಮುಖ ಭದ್ರಕೋಟೆಯನ್ನು ನಾಶಗೊಳಿಸಿದ್ದವು.

ಲೆಬನಾನ್ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2023ನಲ್ಲಿ ಆರಂಭವಾದ ಇಸ್ರೇಲ್-ಹಿಜ್ಬುಲ್ಲಾ ಯುದ್ಧದಲ್ಲಿ ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಇದುವರೆಗೂ ಒಟ್ಟು 2,367 ಜನ ಸಾವನ್ನಪ್ಪಿದ್ದು, 11088 ಜನ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.