ಕ್ರೀಡೆಗಳು

ಅಶ್ವಿನ್ ಗೆ ತಲೆಬಾಗಿದ್ದೇಕೆ ಕಿಂಗ್ ಕೊಹ್ಲಿ?

ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಅಶ್ವಿನ್​ ಬರೆದುಕೊಂಡರು. ಇದೇ ಸಂದರ್ಭದಲ್ಲಿ ಟೀಮ್​ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ, ಅಶ್ವಿನ್ ಆಟಕ್ಕೆ ತಲೆಬಾಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ. ಬಾಂಗ್ಲಾದೇಶದ ವಿರುದ್ಧ ಬೃಹತ್ ಜಯ ಸಾಧಿಸುವಲ್ಲಿ ಅಶ್ವಿನ್​ ಪ್ರಮುಖ ಪಾತ್ರ ವಹಿಸಿದರು.

ಚೆನ್ನೈ:  ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್‌ ನಲ್ಲಿ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 280 ರನ್‌ ಗಳ ಜಯ ಸಾಧಿಸಿದ್ದು, 515 ರನ್‌ ಗಳ ಗುರಿಯೊಂದಿಗೆ ಕಣಕ್ಕೆ ಇಳಿದ ಬಾಂಗ್ಲಾ ಪಡೆಗೆ ರವಿಚಂದ್ರನ್ ಅಶ್ವಿನ್ ತಮ್ಮ ಸ್ಪಿನ್ ಮ್ಯಾಜಿಕ್‌ ನಿಂದ ಪೆಟ್ಟು ನೀಡಿದರು. ಮೊದಲ ಇನ್ನಿಂಗ್ಸ್‌ ನಲ್ಲಿ ಶತಕ ಸಿಡಿಸಿ, ಬ್ಯಾಟಿಂಗ್ ನಲ್ಲಿ ಕಮಾಲ್ ಮಾಡಿದ್ದ ಈ ಅನುಭವಿ ಆಟಗಾರ ಎರಡನೇ ಇನ್ನಿಂಗ್ಸ್‌ ನಲ್ಲಿ ಬೌಲಿಂಗ್ ನಲ್ಲಿ ಜಾದೂ ಮಾಡಿದರು. ಈ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಅಕ್ಷರಶಃ ಮಿಂಚಿದರು.

ಆರ್. ಅಶ್ವಿನ್ ಮುಂದೆ ತಲೆಬಾಗಿದ ವಿರಾಟ್ ಕೊಹ್ಲಿ! ರನ್ ಮೆಷಿನ್ ನಡೆಗೆ  ಕ್ರೀಡಾಭಿಮಾನಿಗಳ ಮೆಚ್ಚುಗೆ

ಅಲ್ಲದೆ, ತಮ್ಮ ಹೆಸರಿನಲ್ಲಿ ಹಲವು ದಾಖಲೆಗಳನ್ನು ಅಶ್ವಿನ್ ಬರೆದುಕೊಂಡರು. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ರನ್ ಮೆಷಿನ್ ವಿರಾಟ್ ಕೊಹ್ಲಿ, ಅಶ್ವಿನ್ ಆಟಕ್ಕೆ ತಲೆಬಾಗಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬಾಂಗ್ಲಾದೇಶದ ವಿರುದ್ಧ ಬೃಹತ್ ಜಯ ಸಾಧಿಸುವಲ್ಲಿ ಅಶ್ವಿನ್ ಪ್ರಮುಖ ಪಾತ್ರ ವಹಿಸಿದರು.

Kohli bows down to Ashwin pic.twitter.com/zfTpcQMjVx

ಹೌದು, ಮೊದಲ ಇನ್ನಿಂಗ್ಸ್ ನಲ್ಲಿ 144 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ರವೀಂದ್ರ ಜಡೇಜಾ ಜತೆಗೂಡಿ ಅಶ್ವಿನ್ ಸೂಪರ್ ಶತಕ ಸಿಡಿಸಿದರು. ಎರಡನೇ ಇನ್ನಿಂಗ್ಸ್ ನಲ್ಲಿ ತಮ್ಮ ಸ್ಪಿನ್ ಜಾದೂವಿನಿಂದ ಬಾಂಗ್ಲಾ ಇನ್ನಿಂಗ್ಸ್ ಕಟ್ಟಿಹಾಕಿದರು. ಬರೋಬ್ಬರಿ 6 ವಿಕೆಟ್‌ಗಳನ್ನು ಕಬಳಿಸಿ ಭಾರತಕ್ಕೆ ಭರ್ಜರಿ ಜಯ ತಂದುಕೊಟ್ಟರು. ಈ ಮೂಲಕ ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ 37ನೇ ಬಾರಿಗೆ 5 ವಿಕೆಟ್ ಸಾಧನೆ ಮಾಡಿದರು. ಅಲ್ಲದೆ, ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಆಗಿರುವ ಆಸೀಸ್ ದಂತಕಥೆ ಶೇನ್ ವಾರ್ನ್ ಅವರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನ ಹಂಚಿಕೊಂಡರು.

ಇವರಿಗಿಂತ ಮೊದಲು ಮುತ್ತಯ್ಯ ಮುರಳೀಧರನ್ 67 ಬಾರಿ 5 ವಿಕೆಟ್ ಕಬಳಿಸಿದ್ದಾರೆ. ಅಶ್ವಿನ್ ಅವರ ಆಟದಿಂದ ಪ್ರಭಾವಿತರಾದ ವಿರಾಟ್ ಕೊಹ್ಲಿ, ಕ್ರೀಡಾಂಗಣದಲ್ಲಿ ಅವರಿಗೆ ತೋರಿದ ಗೌರವ ಕ್ರೀಡಾಭಿಮಾನಿಗಳ ಮನಗೆದ್ದಿದೆ. ಅಶ್ವಿನ್ ಅವರ ಮುಂದೆ ಬಂದ ಕೊಹ್ಲಿ, ತನ್ನ ಎರಡೂ ಕೈಗಳನ್ನು ಮೇಲೆ ಎತ್ತಿ ತಲೆಬಾಗುವ ಮೂಲಕ ಅಶ್ವಿನ್ ಅವರಿಗೆ ವಿಶೇಷ ಗೌರವ ಸಲ್ಲಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೊಹ್ಲಿ ನಡೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.