ದೇಶ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ : NCPಗೆ ಮೃತ ಬಾಬಾ ಸಿದ್ದಿಕಿ ಮಗ ಸೇರ್ಪಡೆ.

ಮುಂಬೈ: ಅಕ್ಟೋಬರ್ 12 ರಂದು ಗುಂಡೇಟಿಗೆ ಬಲಿಯಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದ ಬಣಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅಪ್ಪನ ನಂತರ ಮಗನೂ ಕೂಡಾ ರಾಜಕೀಯ ಹಾದಿ ಹಿಡಿದ್ದಿದ್ದಾರೆ..

ಸ್ನೇಹಿತರೇ ತಂದೆ ಬಾಬಾ ಸಿದ್ದಿಕಿ ಹತ್ಯೆಯ ನಂತರ ಅವರ ಸ್ಥಾನವನ್ನ ಯಾರು ತುಂಬುತ್ತಾರೆ ಅನ್ನೋ ಕುತೂಹಲ ಸಾಕಷ್ಟು ಜನರಲ್ಲಿ ಮೂಡಿದ್ದು ಸತ್ಯ, ಆದ್ರೆ ಈಗ ಆ ಸ್ಥಾನವನ್ನ ಬಾಬಾ ಸಿದ್ದಿಕಿ ಮಗ ತುಂಬಲು ರೆಡಿಯಾಗಿದ್ದಾರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೆಣೆಸೋಕೆ ಎಲ್ಲಾ ತಯಾರಿ ನಡೆಸಿದ್ದಾರೆ, ಮಹಾರಾಷ್ಟ್ರ ಉಪಮುಖ್ಯಮಂತ್ರಿಯೂ ಆಗಿರುವ ಪವಾರ್ ಅವರ ಸಮ್ಮುಖದಲ್ಲಿ ಜೀಶನ್ ಸಿದ್ದಿಕಿ ಶುಕ್ರವಾರ ಬೆಳಗ್ಗೆ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

2019ರ ಚುನಾವಣೆಯಲ್ಲಿ ಮುಂಬೈಯ ವಂಡ್ರೆ ಪೂರ್ವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಇವರನ್ನು ಆಗಸ್ಟ್‌ನಲ್ಲಿ ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದರು. ಪರಿಷತ್‌ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕೆ ಕಾಂಗ್ರೆಸ್‌ ಈ ಕ್ರಮ ತೆಗೆದುಕೊಂಡಿತ್ತು.

ಪಕ್ಷಕ್ಕೆ ಸೇರ್ಪಡೆಯಾದ ನಂತರ ಮಾತನಾಡಿದ ಜೀಶನ್‌ ಸಿದ್ದಿಕ್‌, ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಮತ್ತು ಎಂವಿಎ ನಾಯಕರು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಅವರು ಮೋಸ ಮಾಡುವ ಉದ್ದೇಶ ಹೊಂದಿದ್ದರು. ಆ ಕಷ್ಟದ ಸಮಯದಲ್ಲಿ, ಅಜಿತ್ ಪವಾರ್, ಪ್ರಫುಲ್ ಪಟೇಲ್, ಸುನೀಲ್ ತಾಟ್ಕರೆ ನನ್ನನ್ನು ನಂಬಿದ್ದರು ಎಂದು ತಿಳಿಸಿದ್ದಾರೆ.

ನಾನು ವಂಡ್ರೆ (ಪೂರ್ವ)ದಿಂದ ಸ್ಪರ್ಧಿಸುತ್ತೇನೆ. ಎಲ್ಲ ಜನರ ಪ್ರೀತಿ ಮತ್ತು ಬೆಂಬಲದಿಂದ ನಾನು ಖಂಡಿತವಾಗಿಯೂ ಬಾಂದ್ರಾ ಪೂರ್ವವನ್ನು ಮತ್ತೊಮ್ಮೆ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದಿದ್ದಾರೆ ಜೀಶನ್ ಸಿದ್ದಿಕಿ.