ಸ್ಪೆಷಲ್ ಸ್ಟೋರಿ

ಅ..ಅ.. ಮು..ಮಹಿಳೆಯರ ಮೇಲೆ ಲಾಯರ್ ಜಗದೀಶ್ ಅವಾಚ್ಯ ಶಬ್ದ ಬಳಕೆ ಜಗದೀಶ್ ವಿರುದ್ಧ ಮುಗಿಬಿದ್ದ ಬಿಗ್ ಮನೆ ಸದಸ್ಯರು..!

ಬಿಗ್ ಬಾಸ್ ಕನ್ನಡ11ರ ವೇದಿಕೆ ಬೆಂಕಿ ಬಿರುಗಾಳಿಗೆ ಕಾರಣವಾಗಿದೆ, ಬಿಗ್ ಬಾಸ್ ಮನೆಯಿಂದ ಜಗದೀಶ್ ಹಾಗೂ ರಂಜಿತ್ ಗೇಟ್ ಪಾಸ್ ಕೊಟ್ರಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಲಾಯರ್ ಜಗದೀಶ್ ಯಾವಾಗ ಬಿಗ್ ಬಾಸ್ ಸೀಸನ್ 11ರ ವೇದಿಕೆಗೆ ಎಂಟ್ರಿ ಕೊಟ್ರೋ, ಅಲ್ಲಿಂದಲೇ ಟಿಆರ್ಪಿ ಅಸಲಿ ಆಟ ಶುರುವಾಗಿದ್ದು, ಮನೆ ಮಂದಿಗೆ ಜಗದೀಶ್ ಕಿರಿ ಕಿರಿ ಮಾಡಿದ್ರೂ ಕೂಡಾ, ಹೊರಗಿನ ಮಂದಿಗೆ ಬರಪೂರ ಮನರಂಜನೆ ಕೊಟ್ಟಿದ್ದು ಸುಳ್ಳಲ್ಲಾ, ಇದೇ ಕಾರಣಕ್ಕೆ ಎಲ್ಲೋ ಒಂದು ಕಡೆ ಲಾಯರ್ ಜಗದೀಶ್ ನಾನು ಮಾಡ್ತಿರೋದೆಲ್ಲಾ ಸರಿ ಇದೆ, ಜನ ನಾನ್ ಏನ್ ಮಾಡಿದ್ರೂ ನೋಡ್ತಾರೆ ಅನ್ನೋ ಅತಿಯಾದ ವಿಶ್ವಾಸದಿಂದ, ಮನೆ ಮಂದಿಯ ಮೇಲೆ ಮತ್ತಷ್ಟು ಮುಗಿಬೀಳೋಕೆ ಮುಂದಾಗಿದ್ದಾರೆ, ಇದು ಮುಂದುವರೆದಂತೆ ಹೆಣ್ಣು ಮಕ್ಕಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ..
ಬಿಗ್ ಬಾಸ್ ಕನ್ನಡ: ಇಷ್ಟೂ ಸೀಸನ್ಗಳಲ್ಲಿ ಈವರೆಗೂ ಇಷ್ಟೊಂದು ಬೀಪ್ ಸೌಂಡ್ ಕೇಳೇ ಇಲ್ಲ, ಅಷ್ಟರ ಮಟ್ಟಿಗೆ ಜಗದೀಶ್ ಅವಾಚ್ಯ ಶಬ್ದಗಳನ್ನ ಬಳಸಿರೋದು ಎಪಿಸೋಡ್ ನೋಡಿರೋರಿಗೆ ಗೊತ್ತು, ನಿಮಗೆಲ್ಲಾ ಗೊತ್ತೇ ಇದೆ, ಇಡೀ ದಿನ 24 ಗಂಟೆ ಕ್ಯಾಮರಾ ರೋಲ್ ಆದ್ರೂ ಕೂಡಾ, ಬಿಗ್ ಬಾಸ್ ಕಾರ್ಯಕ್ರಮದ ಕೇವಲ ಒಂದು ಗಂಟೆ ಮಾತ್ರ ತೋರಿಸೋದು, ಯೋಚನೆ ಮಾಡಿ ಎಪಿಸೋಡ್ನಲ್ಲೇ ಇಷ್ಟೊಂದು ಬೀಪ್ ಇದೆ ಅಂದ್ಮೇಲೆ, ಇಡೀ ದಿನ ಎಷ್ಟು ಸಲ ಅವಾಚ್ಯ ಶಬ್ದಗಳನ್ನ ಬಳಸಿರೋದಿಲ್ಲ ಜಗದೀಶ್..


ಒಂದು ಕಡೆ ಹೆಣ್ಣು ಮಕ್ಕಳು ಜಗದೀಶ್ ಮೇಲೆ ತಿರುಗಿ ಬೀಳುತ್ತಿದ್ದಂತೆ ಮತ್ತೊಂದು ಕಡೆ ರಂಜಿತ್ ಇದರ ಮಧ್ಯೆ ಬಂದು, ಲಾಯರ್ ಜಗದೀಶ್ರನ್ನ ತಳ್ಳಿದ್ದಾರೆ, ಈ ಕಾರಣಗಳಿಂದ ಇಂದು ಅಂದ್ರೆ ಶುಕ್ರವಾರ ನಡೆಯುವ ಎಪಿಸೋಡ್ನಲ್ಲಿ, ಬಿಗ್ ಬಾಸ್. ಹೆಣ್ಣು ಮಕ್ಕಳ ಮೇಲೆ ಅವಾಚ್ಯ ಶಬ್ದಗಳನ್ನ ಬಳಸಿದ ಜಗದೀಶ್, ಹಾಗೂ ಜಗದೀಶ್ರನ್ನ ನೂಕಿದ ರಂಜಿತ್ ಇಬ್ಬರನ್ನು ಮನೆಯಿಂದ ಹೊರಗೆ ಬರುವಂತೆ ಆದೇಶ ಕೊಟ್ಟಿದ್ದಾರೆ, ಆದ್ರೆ ನಿಜಕ್ಕೂ ಇವರಿಬ್ಬರು ಮನೆಯಿಂದ ಹೊರಗೆ ಬರ್ತಾರಾ ಅಥವಾ ಸೀಕ್ರೆಟ್ ರೂಮಿಗೆ ಬಿಗ್ ಬಾಸ್ ಕಳಸ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ..