ದೇಶ

ಅಪ್ಪನನ್ನ ಹಿಂದೆ ಕುರಿಸುಕೊಂಡು ಪುಟ್ಟ ಬಾಲಕಿಯ ಸ್ಕೂಟರ್​ ರೈಡ್​..! ಅಪ್ಪನಿಗೆ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು..!

ಔರಂಗಬಾದ್ ಇನಸೈಡರ್‌ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ.ಛತ್ರಪತಿ ಶಂಭಾಜಿನಗರದ ಶಾಕಿಂಗ್ ದೃಶ್ಯಾವಳಿ ಇದು ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ.

ಶಾಲಾ ಸಮವಸ್ತ್ರ ಧರಿಸಿರುವ ಬಾಲಕಿಯೊಬ್ಬಳು ತನ್ನ ತಂದೆಯನ್ನು ಹಿಂದೆ ಕೂರಿಸಿಕೊಂಡು ವಾಹನಗಳು ಸಂಚರಿಸುವ ಬ್ಯುಸಿಯಾದ ರಸ್ತೆಯಲ್ಲಿ ಸ್ಕೂಟರ್‌ ಚಾಲನೆ ಮಾಡುತ್ತಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಔರಂಗಬಾದ್ ಇನಸೈಡರ್‌ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದೆ.ಛತ್ರಪತಿ ಶಂಭಾಜಿನಗರದ ಶಾಕಿಂಗ್ ದೃಶ್ಯಾವಳಿ ಇದು ಎಂದು ಬರೆದು ವೀಡಿಯೋ ಪೋಸ್ಟ್ ಮಾಡಲಾಗಿದೆ. ವೀಡಿಯೋದಲ್ಲಿ ಅಪ್ಪ ಮಗಳನ್ನು ಮುಂದೆ ಕೂರಿಸಿಕೊಂಡು ತಲೆಗೆ ಹೆಲ್ಮೆಟ್ ಕೂಡ ಹಾಕದೇ ಸ್ಕೂಟರ್ ಓಡಿಸುತ್ತಿರುವುದನ್ನು ಕಾಣಬಹುದಾಗಿದೆ. 

ಈ ವೀಡಿಯೋ ನೋಡಿದ ಅನೇಕರು, ತಂದೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಮಗುವಿನ ಮೇಲೆ ಆಕ್ರೋಶ ಬೇಡ ಪೋಷಕರು ಜವಾಬ್ದಾರಿಯುತವಾಗಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಲವು ಅಪಘಾತಗಳಿಗೆ ಇದು ಕಾರಣ, ಇದು ಯಾವ ರೀತಿಯ ಪೇರೆಂಟಿಂಗ್ ಎಂಬುದು ನಮಗೆ ತಿಳಿದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೆ ಕೆಲವರು ಹೆಲ್ಮೆಟ್ ಎಲ್ಲಿ ಸರ್, ಅವರು ಹೆಲ್ಮೆಟ್ ಧರಿಸಿಲ್ಲ, ಮಗಳಿಗೂ ಹೆಲ್ಮೆಟ್ ತೊಡಿಸಿಲ್ಲ ಎಂದು ಹೇಳಿದ್ದಾರೆ.  ಆದರೆ ಮತ್ತೆ ಕೆಲವರು ಈ ವೀಡಿಯೋವನ್ನು ಕ್ಯೂಟ್ ಎಂದು ಬಣ್ಣಿಸಿದ್ದಾರೆ.