ದೇಶ

ಭಾರತದ ಯುಪಿಐ ಸಿಸ್ಟಂ ಅಳವಡಿಸಿಕೊಳ್ಳಲು ಮುಂದಾದ ಮಾಲ್ಡೀವ್ಸ್..!

ಮಾಲ್ಡೀವ್ಸ್​ ನಲ್ಲಿ ಯುಪಿಐ ಸಿಸ್ಟಂ ಅಳವಡಿಸಿಕೊಳ್ಳುವ ಬಗ್ಗೆ ಮಾಲ್ಡೀವ್ಸ್ ಅಧ್ಯಕ್ಷ, ಮೊಹಮದ್ ಮುಯಿಝು ಚಿಂತನೆ ನಡೆಸಿದ್ದಾರೆ.

ಭಾರತದಲ್ಲಿ ಅಳವಡಿಕೆಯಾಗಿರುವ ಯುಪಿಐ ಪೇಮೆಂಟ್ ಸಿಸ್ಟಂ, ಜಗತ್ತಿನ ಗಮನ ಸೆಳೆದಿದೆ. ಇದೀಗ ಮಾಲ್ಡೀವ್ಸ್ ಕೂಡ ಈ ಸಿಸ್ಟಂನ ಅಳವಡಿಸಿಕೊಳ್ಳುವ ಬಗ್ಗೆ ಚಿತ್ತ ಹರಿಸಿದೆ. ಹಣಕಾಸಿನ ವ್ಯವಹಾರಗಳನ್ನು ಮತ್ತಷ್ಟು ಬಲಪಡಿಸಿ, ಆರ್ಥಿಕತೆಗೆ ಉತ್ತೇಜನ ನೀಡಲು ಮಾಳ್ಡೀವ್ಸ್ ನಲ್ಲೂ ಯುಪಿಐ ಸಿಸ್ಟಂನ ಜಾರಿ ಮಾಡುತ್ತಿರುವ ಬಗ್ಗೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು ತಿಳಿಸಿದ್ದಾರೆ.