ಕರ್ನಾಟಕ

ಭ್ರೂಣಹತ್ಯೆ ಜಾಲ ಬೇಟೆಯಾಡಿದ ಮಂಡ್ಯ ಪೊಲೀಸರು..!

ಭ್ರೂಣ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು, ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ 12 ಜನ ಆರೋಪಿಗಳನ್ನ ಬಂಧಿಸಿದ್ದಾರೆ.

ಮಂಡ್ಯ : ಮಂಡ್ಯ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಹೆಣ್ಣು ಭ್ರೂಣಹತ್ಯೆ ಜಾಲ ಭೇದಿಸಿದ್ದಾರೆ. ಮಂಡ್ಯ ಸೇರಿ ರಾಜ್ಯದ ಹಲವೆಡೆ ನಡೆದಿದ್ದ ಹೆಣ್ಣು ಭ್ರೂಣ ಪತ್ತೆ-ಹತ್ಯೆ ಪ್ರಕರಣದ  ಕಿಂಗ್ ಪಿನ್‌ ಅಭಿಷೇಕ್, ವೀರೇಶ್ ರನ್ನ ಬಂಧಿಸಲಾಗಿದೆ. 

ಮಂಡ್ಯದ ಆಲೆಮನೆಯೊಂದರಲ್ಲಿ ಪತ್ತೆಯಾಗಿದ್ದ ಭ್ರೂಣ ಹತ್ಯೆ ಪ್ರಕರಣ ಸಂಬಂಧ ದೂರು ದಾಖಲಾಗಿತ್ತು. ಈ ಸಂಬಂಧ ಕಾರ್ಯಾಚರಣೆಗಿಳಿದ ಪೊಲೀಸರು, ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.  ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ 12 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರಮುಖ ಆರೋಪಿ, ಅಭಿಷೇಕ್, ವಿರೇಶ್ ಬಂಧಿಸಿ ವಿಚಾರಣೆ ನಡೆಸಿ ಬಳಿಕ ಪುಟ್ಟರಾಜು, ಕುಮಾರ್, ಶಾರದಮ್ಮ, ದಾಸೇಗೌಡ, ಲ್ಯಾಬ್ ಸತ್ಯ, ಮೀನಾ, ಮಲ್ಲಿಕಾರ್ಜುನ್, ಸೋಮಶೇಖರ್, ರತ್ನಮ್ಮ, ಪ್ರೇಮಾ ಎಂಬ ಆರೋಪಿಗಳನ್ನ ಖೆಡ್ಡಾಗೆ ಕೆಡವಿದ್ದಾರೆ.

ಬಂಧಿತ ಆರೋಪಿಗಳಿಂದ ಎರಡು ಸ್ಕ್ಯಾನಿಂಗ್ ಯಂತ್ರಗಳು, ಮೂರು ಕಾರು, ಮೂರು ಮೊಬೈಲ್ ಸೇರಿ ಒಟ್ಟು 23 ಲಕ್ಷ ರೂ ಜಪ್ತಿ ಮಾಡಲಾಗಿದೆ. ಯಶಸ್ವಿ ಕಾರ್ಯಾಚರಣೆ ಹಿನ್ನೆಲೆ SP ಮಲ್ಲಿಕಾರ್ಜುನ ಬಾಲದಂಡಿ ಸೇರಿ ಸಿಬ್ಬಂದಿಗೆ ಬಹುಮಾನ ಘೋಸಿಸಲಾಗಿದೆ.