ದೇಶ

ಜಾವೆಲಿನ್​​ ಥ್ರೋ ಕಿಂಗ್ ನೀರಜ್ ಚೋಪ್ರಾ​​​​​ ಟ್ವೀಟ್​ಗೆ ರೀ ಟ್ವೀಟ್​ ಮಾಡಿದ ಮನು ಭಾಕರ್​​​: ಇದು ಪ್ರೇಮಾಂಕುರದ ಮೊದಲ ಹಜ್ಜೆ ಎಂದ ನೆಟ್ಟಿಗರು..​​

ಡೈಮಂಡ್‌ ಲೀಗ್‌ ಫೈನಲ್ಸ್‌ ಕೂಟದಲ್ಲಿ ಗಾಯದ ನಡುವೆಯೂ ಸ್ಪರ್ಧಿಸಿ 2ನೇ ಸ್ಥಾನ ಪಡೆದ ಎರಡು ಬಾರಿ ಒಲಿಂಪಿಕ್‌ ಪದಕ ವಿಜೇತ ಭಾರತದ ತಾರಾ ಅಥ್ಲೀಟ್‌ ನೀರಜ್‌ ಚೋಪ್ರಾಅವರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಅವಳಿ ಪದಕ ವಿಜೇತೆ ಮನು ಭಾಕರ್‌ ಅಭಿನಂದನೆ ಸಲ್ಲಿಸಿದ್ದಾರೆ.

ನವದೆಹಲಿ: ಡೈಮಂಡ್‌ ಲೀಗ್‌ ಫೈನಲ್ಸ್‌ ಕೂಟದಲ್ಲಿ ಗಾಯದ ನಡುವೆಯೂ ಸ್ಪರ್ಧಿಸಿ 2ನೇ ಸ್ಥಾನ ಪಡೆದ ಎರಡು ಬಾರಿ ಒಲಿಂಪಿಕ್‌ ಪದಕ ವಿಜೇತ ಭಾರತದ ತಾರಾ ಅಥ್ಲೀಟ್‌ ನೀರಜ್‌ ಚೋಪ್ರಾ ಅವರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ ಅವಳಿ ಪದಕ ವಿಜೇತೆ ಮನು ಭಾಕರ್‌ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ನೀರಜ್‌ ಗಾಯದಿಂದ ಶೀಘ್ರದಲ್ಲೇ ಗುಣಮುಖರಾಗುವಂತೆ ಹಾರೈಸಿದ್ದಾರೆ. ಈ ಟ್ವೀಟ್‌ ಈಗ ವೈರಲ್‌ ಆಗಿದೆ.

ಶನಿವಾರ ಮಧ್ಯರಾತ್ರಿ ನಡೆದ ಈ ಋತುವಿನ ಕೊನೆಯ ಡೈಮಂಡ್‌ ಲೀಗ್‌ ಫೈನಲ್ ಸ್ಪರ್ಧೆಯಲ್ಲಿ ನೀರಜ್‌ 87.86 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಸತತ 2ನೇ ವರ್ಷ ರನ್ನರ್‌-ಅಪ್‌ ಸ್ಥಾನ ಪಡೆದ್ದಿದ್ದಾರೆ. ಕೇವಲ 1 ಸೆಂ.ಮೀ. ಅಂತರದಲ್ಲಿ ನೀರಜ್‌ಗೆ  ಮೊದಲ ಸ್ಥಾನ  ಕೈತಪ್ಪಿದೆ. ಪಂದ್ಯದ ಬಳಿಕ ನೀರಜ್‌ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಗಾಯದ ವಿಷಯ ಬಹಿರಂಗಪಡಿಸಿದ್ದಾರೆ. ಅಭ್ಯಾಸದ ವೇಳೆ ಎಡಗೈ ಮುರಿತಕ್ಕೊಳಗಾಗಿ. ತೀವ್ರ ನೋವಿನ ನಡುವೆಯೇ ಸ್ಪರ್ಧಿಸಿದ್ದೆ. ಇದರಿಂದ ನಾನು ನಿರೀಕ್ಷಿತ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ ಎಂದು ನೀರಜ್‌ ಕೈ ಮುರಿದಿರುವುದನ್ನು ತೋರಿಸುತ್ತಿರುವ ಎಕ್ಸ್‌-ರೇ ಸಮೇತ ಟ್ವೀಟ್‌ ಮಾಡಿದ್ದಾರೆ.

ನೀರಜ್‌ ಅವರ ಈ ಟ್ವೀಟ್‌ಗೆ ರೀ ಟ್ವೀಟ್‌ ಮಾಡಿದ ಮನು ಭಾಕರ್‌, “2024 ರಲ್ಲಿಅಮೋಘ ಪ್ರದರ್ಶನ ತೋರಿದ ನೀರಜ್‌ ಅವರಿಗೆ ಅಭಿನಂದನೆಗಳನ್ನ ಸಲ್ಲಿಸಿದ್ದೂ ಅಲ್ಲದೆ. ನೀವು ಶೀಘ್ರವಾಗಿ ಚೇತರಿಸಿಕೊಳ್ಳಲು ಮತ್ತು ಮುಂಬರುವ ವರ್ಷಗಳಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸುವಂತಾಗಲಿ ಎಂದು ಹಾರೈಸುತ್ತೇನೆ” ಎಂದು ಮನು ಭಾಕರ್ ಟ್ವೀಟ್‌ ಮಾಡಿದ್ದಾರೆ. ಮನು ಅವರ ಈ ಟ್ವೀಟ್‌ ಕಂಡು ನೆಟ್ಟಿಗರು ಮತ್ತೆ ನೀರಜ್‌ ಮತ್ತು ಮನು ಪ್ರೀತಿಯ ವಿಚಾರದಲ್ಲಿ ಚರ್ಚೆಗಳನ್ನು ಮಾಡಲಾರಂಭಿಸಿದ್ದಾರೆ. ಇವರಿಬ್ಬರ ಮಧ್ಯೆ ಪ್ರೀತಿ ಇರುವುದು ಖಚಿತ ಎಂದು ಕೆಲವರು ಕಮೆಂಟ್‌ ಕೂಡಾ ಮಾಡಿದ್ದಾರೆ.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ 26 ವರ್ಷ ವಯಸ್ಸಿನ ನೀರಜ್ ‍ಮತ್ತು 22 ವರ್ಷ ವಯಸ್ಸಿನ ಮನು ಗಮನ ಸೆಳೆದಿದ್ದರು. ಶೂಟಿಂಗ್‌ನ ವೈಯಕ್ತಿಕ ವಿಭಾಗ ಮತ್ತು ಮಿಶ್ರ ವಿಭಾಗದಲ್ಲಿ ಮನು ಭಾಕರ್ ಅವಳಿ ಕಂಚಿನ ಪದಕ ಗೆದ್ದರೆ, ನೀರಜ್ ‍ಪುರುಷರ ಜಾವೆಲಿನ್ ಥ್ರೋ ಪಂದ್ಯದಲ್ಲಿ ಬೆಳ್ಳಿ ಪದಕ ಗಳಿಸಿದ್ರು.

ಒಲಿಂಪಿಕ್ಸ್ ಸಮಾರೋಪದಂದು ನೀರಜ್, ಮನು ಹಾಗೂ ಆಕೆಯ ತಾಯಿ ಸುಮೇಧಾ ಭಾಕರ್ ಸಂಭಾಷಣೆ ನಡೆಸುವ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು . ಒಂದು ವಿಡಿಯೊದಲ್ಲಿ ನೀರಜ್ ಮತ್ತು ಮನು ಮಾತನಾಡುವ ವೇಳೆ ಒಬ್ಬರನ್ನೊಬ್ಬರ ಮುಖ ನೋಡಿ ಮಾತನಾಡಲು ಹಿಂಜರಿಯುತ್ತಿರುವುದು ಅಲ್ಲದೆ, ನೀರಜ್ ಜತೆ ಫೋಟೊಗೆ ಫೋಸ್‌ ಕೊಡುವಂತೆ ಮನುಗೆ ಸುಮೇಧಾ ಹೇಳುತ್ತಿರುವುದು, ಮತ್ತೊಂದು ವಿಡಿಯೊದಲ್ಲಿ ನೀರಜ್ ಅವರ ಕೈಯನ್ನು ಮನು ತಾಯಿ ತಮ್ಮ ತಲೆಯ ಮೇಲೆ ಇಟ್ಟು ಪ್ರಮಾಣ ಮಾಡಿಸಿಕೊಳ್ಳುತ್ತಿರುವ ವಿಡಿಯೊ ವೈರಲ್‌ ಆಗಿತ್ತು ಇದನ್ನು ಕಂಡ ನೆಟ್ಟಿಗರು ನೀರಜ್‌ ಚೋಪ್ರಾ ಹಾಗೂ ಶೂಟರ್‌ ಮನು ಭಾಕರ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಹೇಳಿದ್ದರು. ಬಳಿಕ ಈ ವದಂತಿಯನ್ನು ಮನು ತಂದೆ ರಾಮ್‌ಕಿಶನ್ ತಳ್ಳಿ ಹಾಕಿದ್ರು. ಆದಾಗ್ಯೂ ನೆಟ್ಟಿಗರು ಮಾತ್ರ ಇವರಿಬ್ಬರ ಮಧ್ಯೆ ಪ್ರೇಮಾಂಕುರ ಆಗಿರುವು ನಿಜ ಎಂದು ಹೇಳುತ್ತಲೇ ಬಂದಿದ್ದಾರೆ. ಇದೀಗ ಮನು ಟ್ವೀಟ್‌ ನೆಟ್ಟಿಗರಿಗೆ ಮತ್ತೆ ಆಹಾರ ಸಿಕ್ಕಂತಾಗಿದೆ.