ದೇಶ

ಪಾಕ್​ ನೆಲದಲ್ಲಿ ನಿಂತು ಪಾಕ್​​, ಚೀನಾಕ್ಕೆ ಸಚಿವ ಜೈಶಂಕರ್​​ ಖಡಕ್​ ಎಚ್ಚರಿಕೆ

ಉಗ್ರವಾದ, ಬಂಡುಕೋರವಾದ ಹಾಗೂ ಪ್ರತ್ಯೇಕತಾವಾದ ಚಟುವಟಿಕೆಗಳು ಗಡಿಯಾಚೆಯಿಂದ ನಡೆದರೆ ವ್ಯಾಪಾರ, ಇಂಧನ ಹರಿವು ಹಾಗೂ ಸಂಪರ್ಕಕ್ಕೆ ಯಾವುದೇ ಉತ್ತೇಜನ ಸಿಗುವುದಿಲ್ಲ ಎಂದು ಹೇಳುವ ಮೂಲಕ ಭಾರತದ ವಿರುದ್ದ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಅದರ ನೆಲದಲ್ಲೇ ಭಾರತ ತೀಕವಾಗಿ ಚಾಟಿ ಬೀಸಿದೆ.

ನವದೆಹಲಿ (ಅ.17): ಉಗ್ರವಾದ, ಬಂಡುಕೋರವಾದ ಹಾಗೂ ಪ್ರತ್ಯೇಕತಾವಾದ ಚಟುವಟಿಕೆಗಳು ಗಡಿಯಾಚೆಯಿಂದ ನಡೆದರೆ ವ್ಯಾಪಾರ, ಇಂಧನ ಹರಿವು ಹಾಗೂ ಸಂಪರ್ಕಕ್ಕೆ ಯಾವುದೇ ಉತ್ತೇಜನ ಸಿಗುವುದಿಲ್ಲ ಎಂದು ಹೇಳುವ ಮೂಲಕ ಭಾರತದ ವಿರುದ್ದ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ಅದರ ನೆಲದಲ್ಲೇ ಭಾರತ ತೀಕವಾಗಿ ಚಾಟಿ ಬೀಸಿದೆ. ಮತ್ತೊಂದೆಡೆ, ಸಹಕಾರ ಎಂಬುದು ಪರಸ್ಪರ ಗೌರವ, ಸಾರ್ವಭೌಮ ಸಮಾನತೆಯನ್ನು ಅವ ಲಂಬಿಸಿದ್ದಾಗಿರುತ್ತದೆ. 

ಪರಸ್ಪರ ನಂಬಿಕೆಯೊಂದಿಗೆ ಮುನ್ನಡೆದರೆ ಲಾಭವಿದೆ. ಆದರೆ ಅದಕ್ಕೂ ಮುನ್ನ ಭೌಗೋಳಿಕ ಸಮಗ್ರತೆ ಹಾಗೂ ಸಾರ್ವ ಭೌಮತೆಗೆ ಮಾನ್ಯತೆ ನೀಡಬೇಕು. ಏಕಪಕ್ಷೀಯ ಅಜೆಂಡಾ ಹೊಂದಿರಬಾರದು. ವ್ಯಾಪಾರ, ಸಾಗಣೆಗೆ ಸಂಬಂಧಿಸಿದಂತೆ ಜಗತ್ತಿನ ಅತ್ಯುತ್ತಮ ಮಾದರಿಗಳನ್ನಷ್ಟೇ ಆಯ್ದುಕೊಂಡರೆ ಪ್ರಗತಿ ಸಾಧ್ಯವಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಚೀನಾಕ್ಕೂ ಬಿಸಿ ಮುಟ್ಟಿಸಿದೆ. 

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್‌ ಅಧ್ಯಕ್ಷತೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿರುವ ಶಾಂಫ್ಟ್ ಸಹಕಾರ ಸಂಘಟನೆ (ಎಸ್‌ಸಿಒ) ಸಮ್ಮೇಳನದಲ್ಲಿ ಬುಧವಾರ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಆ ವೇದಿಕೆಯನ್ನು ಎರಡೂ ದೇಶಗಳಿಗೆ ತೀಕ್ಷ ಸಂದೇಶ ನೀಡುವುದಕ್ಕೆ ಸೂಕ್ತವಾಗಿ ಬಳಸಿಕೊಂಡರು. 

ವಿಶ್ವಾಸದ ಕೊರತೆ ಇದ್ದರೆ ಪ್ರಾಮಾಣಿಕ ಸಂವಾದ ನಡೆಸುವುದು ಅತ್ಯವಶ್ಯ ಎಂದೂ ತಿಳಿಸಿದರು ಶೃಂಗಸಭೆ ಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಸ್ಲಾಮಾಬಾದ್‌ ಮಂಗಳವಾರ ಆಗಮಿಸಿದ ಜೈಶಂಕರ್ ಅವರು, ಕಳೆದ 9 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ ಭಾರತದ ಮೊದಲ ಸಚಿವರಾಗಿದ್ದಾರೆ. ಎಸ್‌ಒ ಶೃಂಗದಲ್ಲಿ ಭಾರತದ ನಿಯೋಗದ ನೇತೃತ್ವವನ್ನು ಅವರು ವಹಿಸಿದ್ದಾರೆ.