ದೇಶ

ಬ್ರಿಕ್ಸ್​​​ ಶೃಂಗಸಭೆಯಲ್ಲಿ ಮೋದಿ ಮಾತನಾಡಿ ನಾವು ಯಾವುದೇ ಕಾರಣಕ್ಕೂ ಯುದ್ಧಕ್ಕೆ ಬೆಂಬಲ ಕೊಡಲ್ಲ ಎಂದಿದ್ದಾರೆ..

ಮಾಸ್ಕೋ: ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆಯೇ ಹೊರತು ಯುದ್ಧವನ್ನಲ್ಲ ಎಂದು ರಷ್ಯಾದಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ಕೊಟ್ಟಿದ್ದಾರೆ..

ಜಗತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನಮ್ಮ ಸಭೆ ನಡೆಯುತ್ತಿದೆ. ಪ್ರಪಂಚವು ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ವಿಭಜನೆಯ ಬಗ್ಗೆಯೂ ಮಾತನಾಡುತ್ತಿದೆ. ಈ ಸಂದರ್ಭದಲ್ಲಿ ಹಣದುಬ್ಬರವನ್ನು ತಡೆಗಟ್ಟುವುದು ಮತ್ತು ಆಹಾರ, ಶಕ್ತಿ, ಆರೋಗ್ಯ ಮತ್ತು ನೀರಿನ ಭದ್ರತೆಯನ್ನು ಖಾತ್ರಿಪಡಿಸುವುದು ಆದ್ಯತೆಯ ವಿಷಯಗಳಾಗಿವೆ. ತಂತ್ರಜ್ಞಾನದ ಈ ಯುಗದಲ್ಲಿ ತಪ್ಪು ಮಾಹಿತಿ ಹರಡುವಿಕೆ ಮತ್ತು ಡೀಪ್‌ಫೇಕ್‌ ಮೊದಲಾದ ಸೈಬರ್ ವಂಚನೆಗಳಂತಹ ಹೊಸ ಸವಾಲುಗಳು ಎದುರಾಗಿವೆ ಎಂದು ಮೋದಿ ವೇದಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಹಣಕಾಸು ನೆರವು ನೀಡುವವರನ್ನು ಎದುರಿಸಲು ನಮಗೆ ಎಲ್ಲರ ಏಕ ಮನಸ್ಸಿನ ಮತ್ತು ದೃಢವಾದ ಬೆಂಬಲ ಬೇಕು. ಈ ಗಂಭೀರ ವಿಷಯದಲ್ಲಿ ಎರಡು ಮಾನದಂಡಗಳಿಗೆ ಸ್ಥಳವಿಲ್ಲ ಎಂದು ಬ್ರಿಕ್ಸ್  ಶೃಂಗಸಭೆಯಲ್ಲಿ ಮೋದಿ ಒತ್ತಿ  ಹೇಳಿದ್ದಾರೆ