ದೇಶ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಮೊಯೀನ್ ಅಲಿ ವಿದಾಯ

ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪ್ರಕಟಿಸಲಾದ ಇಂಗ್ಲೆಂಡ್ ತಂಡದಲ್ಲಿ ಮೊಯೀನ್ ಅಲಿ ಅವರ ಹೆಸರು ಇರಲಿಲ್ಲ. ಈ ಸರಣಿಯಿಂದ ಇಂಗ್ಲೆಂಡ್ ತಂಡದ ಹಿರಿಯ ಆಟಗಾರರಾದ ಡೇವಿಡ್ ಮಲಾನ್, ಜೋ ರೂಟ್, ಮೊಯೀನ್ ಅಲಿ ಸೇರಿದಂತೆ ಕೆಲವರನ್ನು ಕೈ ಬಿಡಲಾಗಿತ್ತು.ಇತ್ತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಮೊಯೀನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಈ ಹಿಂದೆ ಟೆಸ್ಟ್ ಮ್ಯಾಚ್ ಗೆ ಗುಡ್ ಬೈ ಹೇಳಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಮೊಯೀನ್ ಅಲಿ, ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೂ ವಿದಾಯ ಘೊಷಿಸಿದ್ದಾರೆ. ಇನ್ನುಮುಂದೆ ಅವರು ಫ್ರಾಂಚೈಸಿ ಲೀಗ್ ಕ್ರಿಕೆಟ್  ನಲ್ಲಿ ಮುಂದುವರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಮುಂಬರುವ ಚಾಂಪಿಯನ್ಸ್ ಟ್ರೋಫಿ, ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿಕೊಂಡು, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಹೊಸ ತಂಡವನ್ನು ಕಟ್ಟುವ ಯೋಜನೆ ರೂಪಿಸಿಕೊಂಡಿದೆ. ಹೀಗಾಗಿ 37 ವರ್ಷದ ಮೊಯೀನ್ ಗೆ ಮತ್ತೆ ಆಟವಾಡಲು ಚಾನ್ಸ್ ಸಿಗುವುದು ಅನುಮಾನ. ಅಲ್ಲದೇ ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಪ್ರಕಟಿಸಲಾದ ಇಂಗ್ಲೆಂಡ್ ತಂಡದಲ್ಲಿ ಮೊಯೀನ್ ಅಲಿ ಅವರ ಹೆಸರು ಇರಲಿಲ್ಲ. ಈ ಸರಣಿಯಿಂದ ಇಂಗ್ಲೆಂಡ್ ತಂಡದ ಹಿರಿಯ ಆಟಗಾರರಾದ ಡೇವಿಡ್ ಮಲಾನ್, ಜೋ ರೂಟ್, ಮೊಯೀನ್ ಅಲಿ ಸೇರಿದಂತೆ ಕೆಲವರನ್ನು ಕೈ ಬಿಡಲಾಗಿತ್ತು.ಇತ್ತ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಮೊಯೀನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.