ಕ್ರೀಡೆಗಳು

ಬೌಲಿಂಗ್‌ ಮಾತ್ರವಲ್ಲ ಬ್ಯಾಟಿಂಗ್‌ ನಲ್ಲೂ ಮಿಂಚಿದ ಮೊಹಮ್ಮದ್‌ ಶಮಿ

ಗಾಯದಿಂದ ಚೇತರಿಕೆ ಕಂಡು ದೇಶೀಯ ಕ್ರಿಕೆಟ್‌ ನಲ್ಲಿ ಆಡುತ್ತಿರುವ ಟೀಂ ಇಂಡಿಯಾದ ವೇಗಿ ಮೊಹಮ್ಮದ್‌ ಶಮಿ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ ನಲ್ಲೂ ಮಿಂಚುವ ಮೂಲಕ ತಾವು ಸಂಪೂರ್ಣ ಫಿಟ್‌ ಆಗಿದ್ದೇನೆ ಅನ್ನೋದನ್ನು ಸಾಬೀತು ಪಡಿಸಿದ್ದಾರೆ.

ಬೆಂಗಳೂರು: ಗಾಯದಿಂದ ಚೇತರಿಕೆ ಕಂಡು ದೇಶೀಯ ಕ್ರಿಕೆಟ್‌ ನಲ್ಲಿ ಆಡುತ್ತಿರುವ ಟೀಂ ಇಂಡಿಯಾದ ವೇಗಿ ಮೊಹಮ್ಮದ್‌ ಶಮಿ ಬೌಲಿಂಗ್‌ ಜತೆಗೆ ಬ್ಯಾಟಿಂಗ್‌ ನಲ್ಲೂ ಮಿಂಚುವ ಮೂಲಕ ತಾವು ಸಂಪೂರ್ಣ ಫಿಟ್‌ ಆಗಿದ್ದೇನೆ ಅನ್ನೋದನ್ನು ಸಾಬೀತು ಪಡಿಸಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಂಡೀಗಢ ವಿರುದ್ಧ ನಡೆದ ಪಂದ್ಯದಲ್ಲಿ ಶಮಿ ಬ್ಯಾಟಿಂಗ್ನಲ್ಲಿ ಆರ್ಭಟಿಸಿದ್ದಾರೆ. ಸೋಮವಾರ ನಡೆದಿದ್ದ ಮೊದಲನೇ ಕ್ವಾರ್ಟರ್ಫೈನಲ್ಪಂದ್ಯದಲ್ಲಿ ಟಾಸ್ಸೋತು ಮೊದಲು ಬ್ಯಾಟ್ಮಾಡುವಂತಾದ ಬಂಗಾಳ ತಂಡ, ತನ್ನ ಪಾಲಿನ 20 ಓವರ್ಗಳಿಗೆ 9 ವಿಕೆಟ್ಗಳ ನಷ್ಟಕ್ಕೆ 159 ರನ್ಗಳನ್ನು ಕಲೆ ಹಾಕಿತ್ತು. ಬಂಗಾಳ ತಂಡದ ಪರ 10ನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ಮೊಹಮ್ಮದ್ಶಮಿ ಸ್ಪೋಟಕ ಬ್ಯಾಟಿಂಗ್ಮೂಲಕ ಎಲ್ಲರ ಗಮನವನ್ನು ಸೆಳೆದರು.

ಡೆತ್ಓವರ್ಗಳಲ್ಲಿ ಕ್ರೀಸ್ಗೆ ಬಂದ ಮೊಹಮ್ಮದ್ಶಮಿ ಕೇವಲ 17 ಎಸೆತಗಳಲ್ಲಿ ಎರಡು ಸಿಕ್ಸರ್ಹಾಗೂ ಮೂರು ಬೌಂಡರಿಗಳೊಂದಿಗೆ ಅಜೇಯ 32 ರನ್ಗಳನ್ನು ಸಿಡಿಸಿದರು. ಜತೆಗೆ ಬೌಲಿಂಗ್‌ ನಲ್ಲೂ ಮಿಂಚಿದ ಶಮಿ 1 ವಿಕೆಟ್‌ ಪಡೆದಿದ್ದಾರೆ. ಈ ಪಂದ್ಯದಲ್ಲಿ ಬಂಗಾಳ ತಂಡ 3 ರನ್‌ ಗಳಿಂದ ಗೆಲುವು ಸಾಧಿಸಿದೆ. ಇನ್ನು ಬುಧವಾರ ನಡೆಯಲಿರುವ ಕ್ವಾರ್ಟರ್‌ ಫೈನಲ್‌ 1 ಪಂದ್ಯದಲ್ಲಿ ಬರೋಡಾ ತಂಡದ ವಿರುದ್ಧ ಸೆಣೆಸಲಿದೆ.

ಸೈಯದ್‌ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್‌ ಶಮಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ.