ಕರ್ನಾಟಕ

ಮುಡಾ ಪ್ರಕರಣ - ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕಿಳಿದ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ

ಬೆಂಗಳೂರು - ಮುಡಾ ಪೊಲೀಸ್ ತನಿಖೆ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ 2024ರ ಸೆ.24 ರಂದು ಮುಡಾ ಪ್ರಕರಣದಲ್ಲಿ ಪೊಲೀಸ್ ತನಿಖೆಗೆ ಅನುಮತಗಿ ನೀಡಿರುವ ತೀರ್ಪನ್ನೇ ರದ್ದುಗೊಳಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದಾರೆ. 

ಈ ತನಿಖೆ ವಿಚಾರದಲ್ಲಿ ಸಿದ್ದರಾಮಯ್ಯ ತಕರಾರು ಮೇಲ್ಮನವಿಯ ವಾದದ ವಿವರ ಹೀಗಿದೆ. ಮುಡಾ ಕೇಸ್ನಲ್ಲಿ ರಾಜ್ಯಪಾಲರ ಪೂರ್ವಾನುಮತಿಯೂ ಅಸಂವಿಧಾನಿಕವಾಗಿದೆ.ಇನ್ನೂ ಈ ರಾಜ್ಯಪಾಲರ ಆದೇಶವನ್ನ ಒಪ್ಪಿರುವ ಏಕಸದಸ್ಯ ಪೀಠದ ತೀರ್ಪು ಸಂಪೂರ್ಣ ದೋಷದಿಂದ ಕೂಡಿದೆ. ಈ ವೇಳೆ ಕಾನೂನು ಅಂಶಗಳ ನಿರ್ಲಕ್ಷ್ಯಹಾಗೂ ಅಪ್ರಸ್ತುತ ಸತ್ಯಗಳನ್ನ ಆಧಾರವಾಗಿ ತೀರ್ಪು ನೀಡಲಾಗಿದೆ.ಹಾಗೇ ಏಕಸದಸ್ಯ ಪೀಠದ ತೀರ್ಪು ಕಾನೂನು ವ್ಯಾಪ್ತಿ ಮೀರಿದೆ ಎಂದು ಸಿಎಂ ತಮ್ಮ  ಅರ್ಜಿ ಸಲ್ಲಿಸಿದ್ದಾರೆ.