ವಿದೇಶ

ಪ್ರಾಣ ಉಳಿಸಿಕೊಳ್ಳಲು ಲೈವ್​ ಕಾನ್ಸರ್ಟ್​ನಿಂದ ಓಡಿ ಹೋದ ನಿಕ್​ ಜೋನಸ್​..! ಪ್ರಿಯಾಂಕಾ ಚೋಪ್ರಾ ಗಂಡನ ಹತ್ಯೆಗೆ ಸಂಚು ರೂಪಿಸಿದ್ಯಾರು?

ಪ್ರಿಯಾಂಕಾ ಚೋಪ್ರಾ ಅವರ ಪತಿ ನಿಕ್ ಜೋನಸ್ ಒಬ್ಬ ಅದ್ಭುತ ಗಾಯಕ ಮತ್ತು ಆಗಾಗ್ಗೆ ತಮ್ಮ ಸಹೋದರನೊಂದಿಗೆ ಲೈವ್ ಪರ್ಫಾರ್ಮೆನ್ಸ್​ಗಳನ್ನು ನೀಡುತ್ತಿರುತ್ತಾರೆ.

ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಲೈವ್ ಪರ್ಫಾರ್ಮೆನ್ಸ್ ನೀಡುತ್ತಿದ್ದ ವೇಳೆ ನಿಕ್ ಅವರ ತಲೆಯ ಮೇಲೆ ಕೆಂಪು ಬಣ್ಣದ ಲೇಸರ್ ಬೆಳಕು ಬೀಳುತ್ತದೆ. ತಮ್ಮ ತಲೆಯ ಮೇಲೆ ಲೇಸರ್ ಬೆಳಕು ಬಿದ್ದ ತಕ್ಷಣ ನಿಕ್ ತುಂಬಾ ಗಾಬರಿಗೊಂಡು, ಏನೂ ಯೋಚಿಸದೆ ಕಾನ್ಸರ್ಟ್ನಿಂದ ಓಡಿ ಹೋಗುತ್ತಾರೆ. ಈ ವಿಡಿಯೋ ವೈರಲ್ ಆಗಿರುವುದರಿಂದ ಮತ್ತು ನಿಕ್ ಅವರ ತಲೆಯ ಮೇಲೆ ಕೆಂಪು ಲೇಸರ್ ಬೆಳಕು ಕಂಡು ಬಂದಿರುವುದರಿಂದ ಶಾರ್ಪ್ ಶೂಟರ್ಗಳು ನಿಕ್ ಅವರನ್ನು ಗುರಿಯಾಗಿಸಿಕೊಂಡಿದ್ದರು ಎಂಬ ಊಹಾಪೋಹಗಳು ಹರಿದಾಡುತ್ತಿವೆ.  ಟ್ವಿಟರ್ ಖಾತೆಯಲ್ಲಿ ನಿಕ್ ಅವರ ಕಾನ್ಸರ್ಟ್ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಸಂಚಲನ ಮೂಡಿಸಿದೆ.

ನಿಕ್ ಜೋನಸ್ ಕಾನ್ಸರ್ಟ್ನಿಂದ ಹೋದ ನಂತರ ಅಲ್ಲಿ ತನಿಖೆ ನಡೆಸಲಾಯಿತು. ಲೇಸರ್ ತೋರಿಸಿದ ವ್ಯಕ್ತಿಯನ್ನು ಹಿಡಿದು ಕಾರ್ಯಕ್ರಮದಿಂದ ಹೊರಗೆ ಕಳುಹಿಸಲಾಯಿತು. ಈ ವ್ಯಕ್ತಿಯನ್ನು ಹಿಡಿದ ನಂತರ ನಿಕ್ ಮತ್ತೆ ವೇದಿಕೆಗೆ ಬಂದು ತಮ್ಮ ಪರ್ಫಾರ್ಮೆನ್ಸ್ ಪೂರ್ಣಗೊಳಿಸಿದರು ಎನ್ನಲಾಗಿದೆ. ಆದರೆ, ಈ ಘಟನೆ ಕುರಿತು ಪ್ರಿಯಾಂಕಾ ಚೋಪ್ರಾ ಅವರ ಪತಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಅವರ ಅಭಿಮಾನಿಗಳು ತುಂಬಾ ಚಿಂತಿತರಾಗಿದ್ದಾರೆ. ನಿಕ್ ಜೀವ ಅಪಾಯದಲ್ಲಿದೆ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ದಿಗಿಲು ವ್ಯಕ್ತಪಡಿಸಿದ್ದಾರೆ.