ದೇಶ

ಇನ್ನ್ಮುಂದೆ ಮದರಾಸಗಳಿಂದ ಸರ್ಕಾರಿ ಶಾಲೆಗೆ ಮಕ್ಕಳನ್ನ ಸ್ಥಳಾಂತರಿಸುವಂತಿಲ್ಲ - ಸುಪ್ರೀಂ ಸೂಚನೆ

ಸರ್ಕಾರಿ ಶಾಲೆಗಳಿಗೆ ಮದರಸಾಗಳಿಂದ ಮಕ್ಕಳನ್ನ ಸ್ಥಳಾಂತರಿಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್ ಸಿಪಿಸಿಆರ್) ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ಕೊಟ್ಟಿದೆ.

ನವದೆಹಲಿ : ಸರ್ಕಾರಿ ಶಾಲೆಗಳಿಗೆ ಮದರಸಾಗಳಿಂದ ಮಕ್ಕಳನ್ನ ಸ್ಥಳಾಂತರಿಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್ ಸಿಪಿಸಿಆರ್) ನೀಡಿದ್ದ ಆದೇಶಕ್ಕೆ  ಸುಪ್ರೀಂ ಕೋರ್ಟ್ ತಡೆ ಕೊಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಪೀಠವು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ (ಎನ್ ಸಿಪಿಸಿಆರ್)ಆದೇಶ ಮತ್ತು ಹಲವು ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳನ್ನ ಸದ್ಯದ ಮಟ್ಟಿಗೆ ಅಗತ್ಯವಿದೆ ಎಂದು ಮುಸ್ಲಿಂ ಸಂಘಟನ ಜಮಿಯತ್ ಉಲೇಮಾ-ಇ-ಹಿಂದ್ ಪರ ವಾದ ಮಂಡಿಸಿದನ್ನ ಪೀಠವು ಒಪ್ಪಿದೆ. 

ಉತ್ತರಪ್ರದೇಶ ಮತ್ತು ತ್ರಿಪುರ ರಾಜ್ಯಗಳಲ್ಲಿ ಮಾನ್ಯತೆ ಇಲ್ಲದ ಮದರಸಾಗಳಿಂದ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸ್ಥಳಾಂತರಿಸುವ ಬಗ್ಗೆ ಕ್ರಮ ಕೈಗೊಂಡಿತು. ಈ ಕ್ರಮವನ್ನ ಸಂಸ್ಥೆಯೂ ಪ್ರಶ್ನಿಸಿತು.
ಸುಪ್ರೀಂ ಕೋರ್ಟ್ ಎನ್ ಸಿಪಿಸಿಆರ್ ಆದೇಶವನ್ನ ಆಧರಿಸಿ ರಾಜ್ಯಗಳು ಹೊರಡಿಸಿರುವ ನಿರ್ದೇಶನಗಳಿಗೆ ತಡೆ ನೀಡಿದೆ. 

ಇಷ್ಟಲ್ಲದೇ , ತ್ರಿಪುರ , ಉತ್ತರಪ್ರದೇಶ ಸೇರಿದಂತೆ ಇತರ ರಾಜ್ಯಗಳನ್ನು ಈ ಪ್ರಕರಣದಲ್ಲಿ ಪಾರ್ಟಿಗಳಾಗಿ ಮಾಡುವಂತೆಯೂ ಉಲ್ಲೇಖಿಸಿದೆ.